ಭಾರತ, ಮೇ 14 -- ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ದಿನವೇ ಕಳೆದರೂ ಅದರ ಬೇಸರದ ಹ್ಯಾಂಗೋವರ್​ ಇನ್ನೂ ಇಳಿದಿಲ್ಲ. ಅಭಿಮಾನಿಗಳು ದಿನಪೂರ್ತಿ ಅವರ ಪೋಸ್ಟ್​ಗಳನ್ನೇ ಹಂಚಿಕೊಂಡು ನಿವೃತ್ತಿ ನೀಡಬಾರದಿತ್ತು ಎಂದು ಬೇಸರ ತೋಡಿಕೊಳ್ಳುತ್ತಿದ್ದಾರೆ.

ಕೆಲವರು ಅವರ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ಹೇಗಿದ್ದ, ಹೇಗೆ ಬೆಳೆದ ಎಂದು ಕೊಂಡಾಡುತ್ತಿದ್ದಾರೆ. ಕ್ರಿಕೆಟ್​​ ಜಗತ್ತು ಮಾತ್ರವಲ್ಲ, ಫುಟ್ಬಾಲ್, ಟೆನಿಸ್ ಸೇರಿದಂತೆ ಉಳಿದ ಕ್ರೀಡಾಪಟುಗಳೂ ಕೊಹ್ಲಿ ನಿವೃತ್ತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಇಷ್ಟೆಲ್ಲಾ ಪ್ರೀತಿ ಸಂಪಾದಿಸಲು ತಾನು ಕ್ರಿಕೆಟ್ ಮೇಲಿಟ್ಟಿದ್ದ ಬದ್ಧತೆಯೇ ಕಾರಣ.

ಕೊಹ್ಲಿಗೆ ಕ್ರಿಕೆಟ್​​ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದಕ್ಕೆ ಆ ಒಂದು ಘಟನೆ ಸಾಕ್ಷಿ. ತನ್ನ ತಂದೆ ಕೊನೆಯುಸಿರೆಳೆದ ಕ್ಷಣವನ್ನು ಕಣ್ಣಾರೆ ನೋಡಿದ್ದರೂ ತನ್ನ ತಂಡವನ್ನು ಪಾರು ಮಾಡುವ ಮೂಲಕ ಅಪ್ಪನ ಕನಸಿಗೆ ನೀರೆರೆದಿದ್ದರು. ತಂದೆಯ ನಿಧನದ ನೋವಿನ ನಡುವೆಯೂ ಬ್ಯ...