ಭಾರತ, ಏಪ್ರಿಲ್ 25 -- ಬಿಎಸ್‌ಎಫ್‌ ಯೋಧನ ಫೋಟೋ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ಉಗ್ರ ದಾಳಿ ನಡೆದ ನಂತರ, ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಜತೆಗಿನ ರಾಜತಾಂತ್ರಿಕ ಬಾಂಧವ್ಯಗಳನ್ನು ಕಡಿಮೆ ಮಾಡಿ ಎಚ್ಚರಿಸಿದೆ. ಇದಾದ ಬಳಿಕವೂ ಪಾಕಿಸ್ತಾನ ತನ್ನ ಹೇಡಿತನದ ಕೃತ್ಯವನ್ನು ಮುಂದುವರಿಸಿದೆ. ಭಾರತದ ಸೇನಾ ಮೂಲಗಳು ತಿಳಿಸಿದ ಪ್ರಕಾರ, ಪಂಜಾಬ್‌ ಗಡಿ ಭಾಗದಲ್ಲಿ ಅಚಾನಕ್ ಆಗಿ ಗಡಿದಾಟಿದ ಬಿಎಸ್‌ಎಫ್‌ ಯೋಧನನ್ನು ಪಾಕಿಸ್ತಾನ ರೇಂಜರ್ಸ್‌ ಬಂಧಿಸಿದ್ದಾರೆ. ಬಳಿಕ ಆ ಯೋಧನ ಕಣ್ಣುಗಳಿಗೆ ಪಟ್ಟಿಕಟ್ಟಿ ಆತನ ಬಳಿ ಇದ್ದ ಶಸ್ತ್ರಾಸ್ತ್ರ, ನೀರಿನ ಬಾಟಲಿ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡು ತೆಗೆದ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.

ಪಾಕ್‌ ರೇಂಜರ್ಸ್ ಬಂಧಿಸಿರುವ ಬಿಎಸ್‌ಎಫ್ ಯೋಧನನ್ನು ಕೋಲ್ಕತಾದ ಪಿಕೆ ಸಿಂಗ್ ಎಂದು ಗುರುತಿಸಲಾಗಿದೆ. ಈ ಯೋಧ ಇನ್ನೂ ಪಾಕಿಸ್ತಾನ ರೇಂಜರ್ಸ್‌ ವಶದಲ್ಲೇ ಇದ್ದು, ಬಿಎಸ್‌ಎಫ್ ಅಧಿಕಾರಿಗಳು ಪಾಕ್ ಸೇನಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ಬಿಎಸ್‌ಎಫ್ ಯ...