Bengaluru, ಏಪ್ರಿಲ್ 12 -- Success Story: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪತ್ರಕರ್ತ ಪ್ರಕಾಶ್ ಎಜೆ, ಶಿಕ್ಷಕಿ ಉಷಾ ದಂಪತಿಯ ಪುತ್ರ, ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜ್‌ ವಳಚಿಲ್‌ನ ವಿದ್ಯಾರ್ಥಿ ಷಡ್ಜಯ್ ಎಪಿ ನಾಲ್ಕನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. 600 ಅಂಕಗಳಿಗೆ 596 ಅಂಕ ಗಳಿಸಿದ್ದು ಶೇಕಡ 99.37 ಫಲಿತಾಂಶ ದಾಖಲಿಸಿದ್ದಾರೆ. ಕನ್ನಡ, ರಸಾಯನ ಶಾಸ್ತ್ರ, ಜೀವಶಾಸ್ತ್ರಗಳಲ್ಲಿ ತಲಾ 100, ಭೌತಶಾಸ್ತ್ರ 98, ಗಣಿತ ಮತ್ತು ಇಂಗ್ಲಿಷ್‌ನಲ್ಲಿ ತಲಾ 99 ಅಂಕಗಳಿಸಿದ್ದಾರೆ. ಷಡ್ಜಯ್ ಎಪಿ ಅವರ ತಂದೆ ಪ್ರಕಾಶ್ ಎಜೆ ಮತ್ತು ತಾಯಿ ಉಷಾ ಅವರು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜತೆಗೆ ಮಾತನಾಡಿದ್ದು, ಪುತ್ರನ ಕಲಿಕಾ ಯಶಸ್ಸಿನ ಸೂತ್ರವನ್ನು ಹಂಚಿಕೊಂಡಿದ್ದಾರೆ.

ಪ್ರಕಾಶ್ ಎಜೆ ಮತ್ತು ಉಷಾ ಅವರು ತಮ್ಮ ಪುತ್ರ ಷಡ್ಜಯ್‌ ಎಪಿ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದು, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪುತ್ರನಿಗೆ 4ನೇ ರ‍್ಯಾಂಕ್ ಬಂದಿದೆ. ಆತ ಸದ್ಯ ಕರ್ನಾಟಕ...