Bengaluru, ಏಪ್ರಿಲ್ 30 -- ಮಲಯಾಳಂ ನಟರಾದ ಮ್ಯಾಥ್ಯೂ ಥಾಮಸ್, ಅರ್ಜುನ್ ಅಶೋಕನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ʻಬ್ರೊಮಾನ್ಸ್ʼ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲದೆ, ಕಲೆಕ್ಷನ್‌ನಲ್ಲೂ ಕಮಾಲ್‌ ಮಾಡಿದೆ. ಇದೇ ವರ್ಷದ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಅಡ್ವೆಂಚರ್ ಕಾಮಿಡಿ ಸಿನಿಮಾಕ್ಕೆ ನೋಡುಗರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಈ ಪಾಸಿಟಿವ್‌ ಟಾಕ್‌ನಿಂದಲೇ ಒಳ್ಳೆಯ ಗಳಿಕೆಯನ್ನೂ ಕಂಡಿತ್ತು. ಹೀಗಿರುವ ಚಿತ್ರ ಅದ್ಯಾವಾಗ ಒಟಿಟಿಗೆ ಬರಲಿದೆ ಎಂದು ಕಾದಿದ್ದೇ ಬಂತು. ಆದರೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಕೊನೆಗೂ ಒಟಿಟಿಗೆ ಲಗ್ಗೆ ಇಟ್ಟಿದೆ.

ʻಬೊಮಾನ್ಸ್ʼ ಸಿನಿಮಾ ಇಂದು (ಏಪ್ರಿಲ್ 30) ಸಂಜೆ 5.30 ಗಂಟೆಗೆ SonyLIV ಒಟಿಟಿಯಲ್ಲಿ ಸ್ಟ್ರೀಮಿಂಗ್‍ ಆಗಲಿದೆ. ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿಯೂ ಸ್ಟ್ರೀಮಿಂಗ್‍ಗೆ ಬರಲಿದೆ. ಈ ಚಿತ್ರವನ್ನು ಮೇ 1 ರಂದು ತರುವುದಾಗಿ ಈ ಹಿಂದೆ ಸೋನಿ ಲಿವ್ ಘೋಷಿಸಿತ್ತು. ಆದರೆ, ಒಂದು ದಿನ ಮುಂಚಿತವಾಗಿ ಇಂದು ಸಂಜೆ ಈ ಚಿತ್ರ ...