ಭಾರತ, ಫೆಬ್ರವರಿ 12 -- ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಮಾಡಬೇಕು ಎನ್ನುವುದು ಹಲವರ ಕನಸು. ಆದರೆ ಇದಕ್ಕೆ ಸೂಕ್ತ ಬಂಡವಾಳವಿಲ್ಲದೇ ಹಿಂದೇಟು ಹಾಕುವವರೇ ಹೆಚ್ಚು. ಇನ್ನೂ ಕೆಲವರು ಹಣವಿದ್ದರೂ ಸ್ಥಳಾವಕಾಶದ ಕೊರತೆ ಅನುಭವಿಸಬಹುದು. ಆದರೆ ಹಣವೂ ಕಡಿಮೆ ಇದ್ದು, ಸ್ಥಳಾವಕಾಶವೂ ಕಡಿಮೆ ಇದೆ ಎಂದರೆ ನೀವು ಅಣಬೆ ಕೃಷಿ ಆರಂಭಿಸಬಹುದು. ಇದು ಸದ್ಯದ ಭರವಸೆಯ ವ್ಯವಹಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅಣಬೆ ಕೃಷಿ ಅತ್ಯಂತ ಜನಪ್ರಿಯ ಉದ್ಯಮವಾಗಿದೆ.

ಅಣಬೆ ಬೆಳೆಯಲು ಹೆಚ್ಚು ಭೂಮಿಯ ಅಗತ್ಯವಿಲ್ಲ. ಹೆಚ್ಚು ಹೂಡಿಕೆ ಮಾಡುವ ಅಗತ್ಯವೂ ಇಲ್ಲ. ಮನೆಯಲ್ಲಿಯೇ ಕಡಿಮೆ ವೆಚ್ಚದಲ್ಲಿ ಅಣಬೆ ಕೃಷಿ ಆರಂಭಿಸಬಹುದು. ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿ ಅಣಬೆಗಳು. ಇದರಲ್ಲಿ ಪ್ರೊಟೀನ್ ಕೂಡ ಸಮೃದ್ಧವಾಗಿದೆ. ಇದು ಶುದ್ಧ ಸಾವಯವ ಕೃಷಿ. ಮಧುಮೇಹಿಗಳಿಗೆ ಇದು ಉತ್ತಮ ಆಹಾರ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಸಣ್ಣ ಜಮೀನುಗಳಲ್ಲಿಯೂ ಅಣಬೆಗಳನ್ನು ಬೆಳೆಸುವ ಮೂಲಕ ನೀವು ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ಗಳಿಸಬಹುದು.

ಅಣಬೆಗಳನ್...