ಭಾರತ, ಏಪ್ರಿಲ್ 2 -- ಅನೇಕ ಜನರು ಮಧ್ಯಾಹ್ನ ನಿದ್ರಿಸುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಊಟ ಆದ ಕೂಡಲೇ ವಿಶ್ರಾಂತಿಗಾಗಿ ನಿದ್ರಿಸುವವರು ಸಂಜೆ ಎದ್ದೇಳಲು ಅಷ್ಟೇ ಆಲಸ್ಯ ತೋರುತ್ತಾರೆ. ಇದರಿಂದ ಶರೀರಕ್ಕೆ ಒಂದು ವಿರಾಮ ಸಿಕ್ಕಂತೆ ಎಂದು ಅಡಿಕ್ಟ್ ಆಗಿರುತ್ತಾರೆ. ಒಂದು ವೇಳೆ ನಿದ್ರೆ ಮಾಡದಿದ್ದರೆ ಏನೋ ಕಳೆದುಕೊಂಡಂತೆ ಕಿರಿಕಿರಿ, ಜಡತ್ವವನ್ನು ಅನುಭವಿಸುತ್ತಾರೆ. ರಾತ್ರಿ ನಿದ್ದೆ ಆರೋಗ್ಯ ಸುಧಾರಿಸಿದರೆ, ಈ ಮಧ್ಯಾಹ್ನದ ನಿದ್ರೆ ತೂಕ ಹೆಚ್ಚಿಸುತ್ತದೆ.

ಪ್ರಮಾಣೀಕೃತ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ. ಶಿಖಾ ಸಿಂಗ್ ಅವರ ಯೂಟ್ಯೂಬ್ ಬಯೋ ಪ್ರಕಾರ, ಮಧ್ಯಾಹ್ನದ ನಿದ್ರೆ ತೂಕ ಹೆಚ್ಚಾಗಲು ಹೇಗೆ ಕೊಡುಗೆ ನೀಡುತ್ತದೆ, ನಿದ್ರೆ ಮಾಡಲು ಸರಿಯಾದ ಸಮಯ ಯಾವುದು ಎಂಬುದನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್ ಮೂಲಕ ತಿಳಿಸಿದ್ದಾರೆ.

ಸಂಶೋಧನೆಯ ಪ್ರಕಾರ, ಮಧ್ಯಾಹ್ನದ ನಿದ್ರೆಯಿಂದಾಗಿ ಶೇ.23ರಷ್ಟು ತೂಕ ಹೆಚ್ಚಿಸುವ ಸಾಧ್ಯತೆ ಇರುತ್ತದೆ. 30 ನಿಮಿಷಗಳಿಗಿಂತ ಹೆಚ್ಚು ಕಾಲ ನಿದ್ರೆ ಮಾಡಿದರೆ, ಚಯಾಪಚಯ ಕ್ರಿಯೆ ಗಮನಾರ್ಹವಾಗಿ ನಿಧಾನವಾಗ...