ಭಾರತ, ಏಪ್ರಿಲ್ 7 -- Nimbiya Banada Myaga: ವರನಟ ಡಾ. ರಾಜಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ನಾಯಕನಾಗಿ ಅಭಿನಯಿಸಿರುವ ʻನಿಂಬಿಯಾ ಬನಾದ ಮ್ಯಾಗʼ ಚಿತ್ರ ಕಳೆದ ಶುಕ್ರವಾರ (ಏಪ್ರಿಲ್‌ 4) ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮಲೆನಾಡಿನ ಸೊಬಗು, ತಾಯಿ ಮಗನ ಸಂಬಂಧದ ದೃಶ್ಯಕಾವ್ಯವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಹೀಗಿರುವಾಗಲೇ ಸೋಷಿಯಲ್‌ ಮೀಡಿಯಾದ ಇನ್ನೊಂದು ಬದಿಯಲ್ಲಿ ಷಣ್ಮುಖ ಗೋವಿಂದರಾಜ್‌ ಅವರನ್ನು ಕೊಂಚ ಕಟುವಾಗಿಯೇ ಟ್ರೋಲ್‌ ಮಾಡುವ ಕೆಲಸವೂ ನಡೆಯುತ್ತಿದೆ.

ಡಾ. ರಾಜ್‌ಕುಮಾರ್‌ ಕುಟುಂಬದ ಮೂರನೇ ತಲೆಮಾರಿನ ಕುಡಿ ಈ ಷಣ್ಮುಖ ಗೋವಿಂದರಾಜ್‌. ಅಣ್ಣಾವ್ರ ಪುತ್ರಿ ಲಕ್ಷ್ಮೀ ಮತ್ತು ಗೋವಿಂದರಾಜು ದಂಪತಿಯ ಮಗ ಈ ಷಣ್ಮುಖ. ಓದಿದ್ದು. ಎಂಬಿಎ. ಅದೇ ಓದಿಗೆ ತಕ್ಕದಾಗಿ ಆಸ್ಟ್ರೇಲಿಯಾದಲ್ಲಿ ಲಕ್ಷ್‌ ಲಕ್ಷ ಸಂಬಳದ ಕೆಲಸ. ಆದರೆ, ಅದೇ ಕೆಲಸ ಬಿಟ್ಟು, ತಾತ ಮತ್ತು ಮಾವಂದಿರ ಹಾದಿಯಲ್ಲಿ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇ...