Bengaluru, ಮಾರ್ಚ್ 25 -- ಕಟಕ ರಾಶಿಯ ಯುಗಾದಿ ವರ್ಷ ಭವಿಷ್ಯ: ಕಟಕ ರಾಶಿಯು ದ್ವಾದಶ ರಾಶಿಗಳ ಚಕ್ರದಲ್ಲಿ 4ನೇ ರಾಶಿ. ಏಡಿ ಈ ರಾಶಿಯ ಚಿಹ್ನೆ. ಈ ರಾಶಿಯಲ್ಲಿ ಜನಿಸಿದವರಿಗೆ ತಮ್ಮ ಮನೆಯ ಬಗ್ಗೆ ತುಂಬಾ ಕಾಳಜಿ, ಪ್ರೀತಿ ಇರುತ್ತದೆ. ತಮಗಿಂತಲೂ, ಜಗತ್ತಿಗಿಂತಲೂ ತಮ್ಮ ಕುಟುಂಬ, ಮನೆಯೇ ಮುಖ್ಯ ಎನ್ನುವ ವಿಚಾರದಲ್ಲಿ ಈ ರಾಶಿಯವರಿಗೆ ಯಾವುದೇ ಗೊಂದಲ ಇರುವುದಿಲ್ಲ.

ನೀವು ಪುನರ್ವಸು ನಕ್ಷತ್ರದ 4ನೇ ಪಾದ, ಪುಷ್ಯ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಆಶ್ಲೇಷ ನಕ್ಷತ್ರದ 1, 2, 3 ಮತ್ತು 4ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಕಟಕ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಹಿ ಆದಲ್ಲಿ ಪುನರ್ವಸು ನಕ್ಷತ್ರ. ಹು, ಹೆ, ಹೊ ಮತ್ತು ಡ ಆದಲ್ಲಿ ಪುಷ್ಯ ನಕ್ಷತ್ರ. ಡಿ, ಡು, ಡೆ ಮತ್ತು ಡೊ ಆದಲ್ಲಿ ಆಶ್ಲೇಷ ನಕ್ಷತ್ರದೊಂದಿಗೆ ಕಟಕ ರಾಶಿ ಆಗುತ್ತದೆ.

ಕಟಕ ರಾಶಿಗೆ ಸೇರಿದವರಿಗೆ ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂ...