ಭಾರತ, ಮಾರ್ಚ್ 3 -- ಕಟಕ ರಾಶಿಯ ಯುಗಾದಿ ವರ್ಷ ಭವಿಷ್ಯ: ಕಟಕ ರಾಶಿಯು ದ್ವಾದಶ ರಾಶಿಗಳ ಚಕ್ರದಲ್ಲಿ 4ನೇ ರಾಶಿ. ಏಡಿ ಈ ರಾಶಿಯ ಚಿಹ್ನೆ. ಈ ರಾಶಿಯಲ್ಲಿ ಜನಿಸಿದವರಿಗೆ ತಮ್ಮ ಮನೆಯ ಬಗ್ಗೆ ತುಂಬಾ ಕಾಳಜಿ, ಪ್ರೀತಿ ಇರುತ್ತದೆ. ತಮಗಿಂತಲೂ, ಜಗತ್ತಿಗಿಂತಲೂ ತಮ್ಮ ಕುಟುಂಬ, ಮನೆಯೇ ಮುಖ್ಯ ಎನ್ನುವ ವಿಚಾರದಲ್ಲಿ ಈ ರಾಶಿಯವರಿಗೆ ಯಾವುದೇ ಗೊಂದಲ ಇರುವುದಿಲ್ಲ. ನೀವು ಪುನರ್ವಸು ನಕ್ಷತ್ರದ 4ನೇ ಪಾದ, ಪುಷ್ಯ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಆಶ್ಲೇಷ ನಕ್ಷತ್ರದ 1, 2, 3 ಮತ್ತು 4ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಕಟಕ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಹಿ ಆದಲ್ಲಿ ಪುನರ್ವಸು ನಕ್ಷತ್ರ. ಹು, ಹೆ, ಹೊ ಮತ್ತು ಡ ಆದಲ್ಲಿ ಪುಷ್ಯ ನಕ್ಷತ್ರ. ಡಿ, ಡು, ಡೆ ಮತ್ತು ಡೊ ಆದಲ್ಲಿ ಆಶ್ಲೇಷ ನಕ್ಷತ್ರದೊಂದಿಗೆ ಕಟಕ ರಾಶಿ ಆಗುತ್ತದೆ.

ಕಟಕ ರಾಶಿಯಲ್ಲಿ ಜನಿಸಿದ ಮಹಿಳೆಯರು ಸಾಮಾನ್ಯವಾಗಿ ಹೆಚ್ಚಿನ ಆಸೆ, ಆಕಾಂಕ್ಷೆಯನ್ನು ಹೊಂದಿರುತ್ತಾರೆ. ಸದಾ ಕಾಲ ಒಳ್ಳೆಯದನ್ನೇ ಬಯಸುತ್ತಾ ಬಾಳುತ್ತಾರೆ. ಇವರಿಗೆ ಆತ್ಮೀಯರ ಸ...