Bengaluru, ಫೆಬ್ರವರಿ 28 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆಯಲ್ಲಿ ಸಿಸಿಟಿವಿ ವಿಡಿಯೋ ನೋಡಿದ ಮೇಲೆ ಉಂಟಾಗಿರುವ ಮಾನಸಿಕ ಆಘಾತದಿಂದ ಜಾಹ್ನವಿ ಇನ್ನೂ ಹೊರಬಂದಿಲ್ಲ. ಒಂದೆಡೆ ಆಕೆಗೆ ಗರ್ಭಪಾತವಾಗಿದೆ. ಮಗುವನ್ನು ಕಳೆದುಕೊಂಡಿದ್ದಾಳೆ, ಮತ್ತೊಂದೆಡೆ ಜಯಂತ್‌ನ ಪ್ರಶ್ನೆಗಳು ಆಕೆಗೆ ಕಿರಿಕಿರಿ ಉಂಟುಮಾಡುತ್ತಿವೆ. ಆಸ್ಪತ್ರೆಯಲ್ಲಿ ಇದ್ದುಕೊಂಡು ರೆಸ್ಟ್ ಮಾಡಿ ಎಂದು ವೈದ್ಯರು ಹೇಳಿದರೂ, ಆಕೆಯನ್ನು ಜಯಂತ್ ಮನೆಗೆ ಕರೆದುಕೊಂದು ಬಂದಿದ್ದಾನೆ. ಆದರೆ, ಮನೆಯಲ್ಲಿ ಆಕೆಗೆ ಚಿನ್ನದ ಪಂಜರದಲ್ಲಿ ಬಂಧನದಲ್ಲಿರುವ ಗಿಳಿಯಂತೆ ಭಾಸವಾಗುತ್ತಿದೆ. ಹೀಗಾಗಿ ಕಂದನನ್ನು ಕಳೆದುಕೊಂಡ ನೋವನ್ನು ಆಕೆ ಜಯಂತ್ ಮೇಲೆ ತೋರಿಸುತ್ತಿದ್ದಾಳೆ. ಜಯಂತ್, ಜಾಹ್ನವಿಯ ಬದಲಾದ ವರಸೆಯನ್ನು ಕಂಡು ಕಂಗಾಲಾಗಿದ್ದಾನೆ.

ಜಾಹ್ನವಿಗೆ ಜಯಂತ್‌ನ ಕಂಡರೆ ಸಾಕು, ಮೈಯೆಲ್ಲ ಉರಿದುಹೋಗುವಷ್ಟು ಕೋಪ ಬರುತ್ತಿದೆ. ಆಕೆಯ ಬಳಿ ಜಯಂತ್ ಬಂದಾಗಲೆಲ್ಲಾ, ಆಕೆ ಮಾರು ದೂರ ಹೋಗುತ್ತಿದ್ದಾಳೆ. ಊಟ ಮಾಡಿ, ತಿಂಡಿ ತಿನ್ನಿ, ದಯವಿಟ್ಟು ನನ್ನ ಜೊತೆ ಮ...