ಭಾರತ, ಮಾರ್ಚ್ 16 -- ಮಂಗಳೂರು: ಪರಶುರಾಮ ಸೃಷ್ಟಿಯ ತುಳುನಾಡು, ದೈವ-ದೇವರುಗಳ ನೆಲೆ. ನೂರಾರು ದೇಗುಲಗಳು, ದೈವಸ್ಥಾನಗಳು, ನಾಗಾರಾಧನೆ ಸೇರಿದಂತೆ ಹತ್ತಾರು ಧಾರ್ಮಿಕ ಕೇಂದ್ರಗಳು ಈ ನೆಲದ ಅಸ್ಮಿತೆ. ಕರಾವಳಿ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಗೆ ಇಲ್ಲಿನ ಧಾರ್ಮಿಕ ಶ್ರದ್ಧಾಕೇಂದ್ರಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇಂತಹ ಪಟ್ಟಿಗೆ ಹೊಸ ಸೇರ್ಪಡೆಯೇ ಭಟ್ರಬೈಲು-ದೇವರಗುಡ್ಡೆಯಲ್ಲಿ ಎದ್ದುನಿಲ್ಲುತ್ತಿರುವ ಗೋಪಾಲಕೃಷ್ಣ ದೇವಸ್ಥಾನ. ಈ ಸುಂದರ ದೇಗುಲದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಗ್ರಾಮದಲ್ಲಿ ಹಬ್ಬದ ವಾತಾವರಣ ಅದಾಗಲೇ ಶುರುವಾಗಿದ್ದು, ಗೋಪಾಲಕೃಷ್ಣನ ಪ್ರತಿಷ್ಠಾಪಿಸಿ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ವಿಸ್ತೀರ್ಣದ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ತಾಲೂಕು ಆಗಿರುವ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಒಂದು ಹಳ್ಳಿ ಪ್ರದೇಶದ ಹೆಸರೇ ಭಟ್ರಬೈಲು. ಇಲ್ಲಿನ ದೇವರಗುಡ್ಡೆ ಎಂಬ ಧಾರ್ಮಿಕ ಐತಿಹ್ಯವುಳ್ಳ ಸ್ಥಳದಲ್ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.