ಭಾರತ, ಫೆಬ್ರವರಿ 22 -- ಬೆಳಗಾವಿ: ಮರಾಠಿ ಬರಲ್ಲ ಕನ್ನಡ ಮಾತಾಡಿ ಎಂದಿದ್ದಕ್ಕೆ ಕರ್ನಾಟಕ ಸಾರಿಗೆಯ ಕಂಡಕ್ಟರ್‌ ಮೇಲೆ ಮರಾಠಿ ಭಾಷಿಕರು ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸದ್ಯ ಗಡಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ.

ಟಿಕೆಟ್‌ ನೀಡುವ ಸಮಯದಲ್ಲಿ ಮಹಿಳೆಯೊಬ್ಬರ ಬಳಿ, ನನಗೆ ಮರಾಠಿ ಬರಲ್ಲ. ಕನ್ನಡದಲ್ಲಿ ಮಾತನಾಡಿ ಎಂದು ಬಸ್‌ ಕಂಡಕ್ಟರ್‌ ಹೇಳೀದ್ದರು. ಅಷ್ಟಕ್ಕೆ ಹಲ್ಲೆ ಮಾಡಲಾಗಿದೆ. ಮರಾಠಿಗರ ಪುಂಡಾಟಕ್ಕೆ ಕಂಡಕ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ.‌ ಘಟನೆ ನಿನ್ನೆ (ಫೆ.21) ನಡೆದಿದೆ. ಸರ್ಕಾರಿ ಬಸ್ ಬೆಳಗಾವಿಯಿಂದ ಪಂಥ ಬಾಳೇಕುಂದ್ರಿಗೆ ಹೋಗುತ್ತಿತ್ತು. ಯುವತಿಯೊಬ್ಬಳು 2 ಟಿಕೆಟ್​ ತೆಗೆದಿದ್...