ಭಾರತ, ಏಪ್ರಿಲ್ 18 -- ತೆಲುಗಿನ ಬಹುನಿರೀಕ್ಷಿತ ಸಿನಿಮಾ ಓದೆಲಾ 2 ನಿನ್ನೆ (ಏಪ್ರಿಲ್ 17) ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ಹಾಗೂ ವಶಿಷ್ಠ ಸಿಂಹ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಹಾರರ್ ಥ್ರಿಲ್ಲರ್ ಸಿನಿಮಾ ಸಿನಿ ಪ್ರೇಕ್ಷಕರ ನಿರೀಕ್ಷೆಗಳನ್ನು ಸುಳ್ಳು ಮಾಡಿದಂತಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಥಿಯೇಟರ್‌ನಲ್ಲಿ ಬಿಡುಗಡೆಯಾದ ಮರುದಿನವೇ ಈ ಚಿತ್ರ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರಂನಲ್ಲಿ ಪ್ರಸಾರ ಆರಂಭಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ತಮನ್ನಾ ಸಾಧುವಿನ ಪಾತ್ರದಲ್ಲಿ ನಟಿಸಿದ್ದಾರೆ. ಅತಿಮಾನುಷ ಶಕ್ತಿಯ ಕಥಾಹಿನ್ನೆಲೆಯ ಈ ಚಿತ್ರಕ್ಕೆ ಅಶೋಕ್ ತೇಜಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು 2022ರಲ್ಲಿ ಬಿಡುಗಡೆಯಾದ 'ಒದೆಲಾ ರೈಲ್ವೆ ಸ್ಟೇಷನ್‌' ಚಿತ್ರದ ಮುಂದುವರಿದ ಭಾಗವಾಗಿದೆ. ಹಾರರ್ ಸಿನಿಮಾ ನೋಡೋದು ನಿಮಗೆ ಇಷ್ಟ ಅಂದ್ರೆ ನೀವು ತಮನ್ನಾ-ವಶಿಷ್ಠ ನಟನೆಯ ಈ ಸಿನಿಮಾವನ್ನು ಒಟಿಟಿಯಲ್ಲಿ ...