Bengaluru, ಫೆಬ್ರವರಿ 3 -- ಒಂದು ದಿನ ಅರ್ಜುನನು ಶ್ರೀಕೃಷ್ಣನ ಬಳಿಗೆ ಬಂದು, ಹೇ ಮಾಧವ! ನನ್ನಲ್ಲಿ ಕೆಲವು ಪ್ರಶ್ನೆಗಳು ಇವೆ. ಅದಕ್ಕೆ ನೀವು ಮಾತ್ರ ಉತ್ತರಿಸಬಹುದು. ನನ್ನಲ್ಲಿ ಗೊಂದಲವನ್ನು ಸೃಷ್ಟಿಸಿರುವ ಆ ಪ್ರಶ್ನೆಗಳಿಗೆ ದಯವಿಟ್ಟು ಉತ್ತರವನ್ನು ತಿಳಿಸಿ ಎಂದು ಹೇಳಿದನು. ಒಳ್ಳೆಯ ಜನರು ಯಾವಾಗಲೂ ಏಕೆ ನೋವನ್ನು ಅನುಭವಿಸುತ್ತಾರೆ? ಆಗ ಕೃಷ್ಣನು ಅರ್ಜುನನಿಗೆ ನಿನ್ನ ಈ ಪ್ರಶ್ನೆಗೆ ನಾನು ಕಥೆಯ ಮೂಲಕ ನಿನಗೆ ವಿವರಿಸುತ್ತೇನೆ ಎಂದು ಹೇಳಿದನು.

ಒಂದಾದನೊಂದು ಕಾಲದಲ್ಲಿ, ಒಂದು ಊರಿನಲ್ಲಿ ಇಬ್ಬರು ವಾಸಿಸುತ್ತಿದ್ದರು. ಅವರಲ್ಲಿ ಒಬ್ಬನು ಉದ್ಯಮಿ, ಮತ್ತೊಬ್ಬ ಕಳ್ಳ. ಉದ್ಯಮಿಯು ಪ್ರತಿದಿನ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದನು. ಪ್ರತಿದಿನ ಬಡವರಿಗೆ ಆಹಾರವನ್ನು ನೀಡುತ್ತಿದ್ದನು. ಜೊತೆಗೆ ಸಾಕಷ್ಟು ಹಣವನ್ನು ಕಾಣಿಕೆ, ದಾನವಾಗಿ ನೀಡುತ್ತಿದ್ದನು. ಹೀಗಾಗಿ ಕಳ್ಳರು ದೇವಸ್ಥಾನಕ್ಕೆ ಹೋದರೂ ಕಾಣಿಕೆ ಹಣವನ್ನು ಕದಿಯುತ್ತಿದ್ದರು. ಒಮ್ಮೆ ಆ ಊರಿನಲ್ಲಿ ಭಾರೀ ಮಳೆಯಾಯಿತು. ಮಳೆಯಿಂದಾಗಿ ಅಂದು ದೇವಸ್ಥಾನದಲ...