ಭಾರತ, ಏಪ್ರಿಲ್ 17 -- ಕನ್ನಡದ ಹಲವು ನಟಿಯರು ವಿವಾಹವಾಗಿಲ್ಲ. ಕೆಲವು ನಟಿಯರ ವಯಸ್ಸು 40 ದಾಟಿದರೂ ಇವರು ವಿವಾಹ ಬಂಧನಕ್ಕೆ ಒಳಗಾಗಲು ಮನಸ್ಸು ಮಾಡಿಲ್ಲ. ಮದುವೆ ಯಾಕೆ ಸಿಂಗಲ್‌ ಆಗಿರೋಣ ಎಂದು ಕೆಲವರು ಅಂದುಕೊಂಡಿರಬಹುದು. ಯಾವುದೋ ಕಹಿ ನೆನಪಿನ ಕಾರಣದಿಂದ ಕೆಲವರು ಮದುವೆಯಾಗದೆ ಉಳಿದಿರಬಹುದು. ಆರ್‌.ಟಿ. ರಮಾ, ವಿಜಯಲಕ್ಷ್ಮಿ, ಭಾವನಾ ರಾಮಣ್ಣ, ರಮ್ಯಾ ಸೇರಿದಂತೆ ಇನ್ನೂ ವಿವಾಹವಾಗದೆ ಇರುವ 40+ ವಯಸ್ಸಿನ ಈ 9 ನಟಿಯರ ವಿವರ ಪಡೆಯೋಣ.

ದಿವ್ಯಾ ಸ್ಪಂದನಾ (ರಮ್ಯಾ): ಮೋಹಕತಾರೆ ರಮ್ಯಾ ಕೂಡ ಅವಿವಾಹಿತೆಯಾಗಿಯೇ ಉಳಿದಿದ್ದಾರೆ. ರಾಹುಲ್‌ ಗಾಂಧಿ ಸೇರಿದಂತೆ ಹಲವರ ಜತೆ ಈಕೆಯ ಹೆಸರು ತಳಕು ಹಾಕಿಕೊಂಡಿತ್ತು. ಆದರೆ, ಯಾವುದೇ ಕಾಂಟ್ರವರ್ಸಿಗೂ ತಲೆಕೆಡಿಸಿಕೊಳ್ಳದೆ ಮದುವೆಯಾಗದೆಯೇ ಉಳಿದಿದ್ದಾರೆ.

ಜೆನ್ನಿಫರ್‌ ಕೊತ್ವಾಲ್‌: ಕನ್ನಡ ನಟಿ ಜೆನ್ನಿಫರ್‌ ಕೊತ್ವಾಲ್‌ ಕೂಡ 40 ವರ್ಷ ವಯಸ್ಸು ದಾಟಿದರೂ ಮದುವೆಯಾಗಿಲ್ಲ. ಇವರು ಸೂಪರ್‌ಹಿಟ್‌ ಜೋಗಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಬಂಧನ, ಲವಕುಶ, ಮಸ್ತಿ ಮುಂತಾ...