ಭಾರತ, ಫೆಬ್ರವರಿ 4 -- ಇಂದು ಪ್ರತಿಯೊಬ್ಬರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಒತ್ತಡವನ್ನು ಕಡಿಮೆ ಮಾಡದಿದ್ದರೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನೀವು ಅನುಭವಿಸುತ್ತಿರುವ ಒತ್ತಡವು ನಿಮ್ಮ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವನ್ನು ಬೇರ್ಪಡಿಸಿಬಹುದು. ಹೀಗಾಗಿ ಒತ್ತಡದ ಬದುಕಿನಿಂದ ಆಚೆ ಬರುವುದು ಮುಖ್ಯ. ದೀರ್ಘಕಾಲದ ಒತ್ತಡವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರ, ವ್ಯಾಯಾಮ, ಸಾಕಷ್ಟು ನಿದ್ರೆ, ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ಅತ್ಯಗತ್ಯ. ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿದರೆ ನೀವು ತಕ್ಷಣವೇ ಒತ್ತಡದಿಂದ ಹೊರಬರಬಹುದು. ಈ ಬಗ್ಗೆ ಇಲ್ಲಿದೆ ವಿವರ.

ಅಲ್ಲದೆ, ಕೆಲವು ಸಲಹೆಗಳು ಒತ್ತಡವನ್ನು ತಕ್ಷಣ ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಕೇವಲ ಐದು ನಿಮಿಷಗಳಲ್ಲಿ ಒತ್ತಡ ನಿವಾರಿಸುವ ಬಗ್ಗೆ ಇಲ್ಲಿದೆ ಸಲಹೆ.

ನೀರು ಕುಡಿಯಿರಿ: ನೀವು ಒತ್ತಡಕ್ಕೆ ಒಳಗಾದಾಗ ಒಂದು ಲೋಟ ನೀರು ಕುಡಿಯಿರಿ. ಇದು ನಿಮ್ಮ ಒತ್ತಡದ ಮಟ್...