ಭಾರತ, ಫೆಬ್ರವರಿ 2 -- ನಿದ್ರೆ ಎನ್ನುವುದು ಅತ್ಯುತ್ತಮ ಔಷಧ ಎನ್ನುವ ಮಾತಿದೆ. ಸುಖನಿದ್ರೆ ಎನ್ನುವುದು ಕೆಲವರಿಗೆ ವರವಾದರೆ, ಇನ್ನು ಕೆಲವರಿಗೆ ಅದು ಬರುವುದೇ ಇಲ್ಲ. ಒತ್ತಡ ಮತ್ತು ಬ್ಯುಸಿ ಜೀವನಶೈಲಿಯಿಂದಾಗಿ ಹಲವರು ಒಂದು ಒಳ್ಳೆಯ ನಿದ್ರೆಯಿಂದ ವಂಚಿತವಾಗುತ್ತಿದ್ದಾರೆ. ಕೆಲವರಿಗೆ ಕೆಲಸದ ಒತ್ತಡ ಇದ್ದರೆ, ಇನ್ನು ಕೆಲವರಿಗೆ ಮಾನಸಿಕ ಒತ್ತಡ ಇರುತ್ತದೆ. ಮತ್ತೆ ಹಲವರಿಗೆ ಇತರ ಕಾರಣಗಳಿಂದ ಒತ್ತಡ ಉಂಟಾಗಿರಬಹುದು. ಜತೆಗೆ ಆಧುನಿಕ ಜೀವನಶೈಲಿಯು, ಒತ್ತಡವನ್ನು ಕೂಡ ಇಂದಿನ ಜನತೆಗೆ ಕೊಡುಗೆಯಾಗಿ ನೀಡಿದೆ. ಕೆಲಸದ ಒತ್ತಡ, ಕೌಟುಂಬಿಕ ಒತ್ತಡ ಹೀಗೆ ಹಲವು ರೀತಿಯ ಒತ್ತಡಗಳ ಪರಿಣಾಮ ಖಿನ್ನತೆ, ನಿದ್ರಾಹೀನತೆಯ ಸಮಸ್ಯೆಗಳು ಜನರನ್ನು ಬಾಧಿಸುತ್ತವೆ. ಹೀಗೆ ಸದಾ ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದರೆ, ಮುಂದೆ ಅವರಿಗೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುವ ಅಪಾಯವಿದೆ. ಹೃದಯ ಸಂಬಂಧಿ ಕಾಯಿಲೆಗಳೂ ಕಾಣಿಸಿಕೊಳ್ಳಬಹುದು.

ಒತ್ತಡದ ಪರಿಣಾಮ ನಿಮಗೆ ನಿದ್ರೆ ಕಡಿಮೆಯಾದರೆ, ಅದಕ್ಕೆ ಸಹಕರಿಸಲು ಕೆಲವೊಂದು ಸರಳ ಪಾನೀಯಗಳನ್ನು ನೀವು ಪ್ರಯತ್...