ಭಾರತ, ಮೇ 22 -- ಮಾನ್‌ಸ್ಟಾರ್‌ ಹಂಟ್‌ 2: ಜೂನ್‌ ತಿಂಗಳು ಹತ್ತಿರದಲ್ಲಿದೆ. ಶಾಲೆ ಕಾಲೇಜುಗಳು ಸದ್ಯದಲ್ಲಿಯೇ ಆರಂಭವಾಗಲಿದೆ. ಮಕ್ಕಳು ಟಿವಿ ನೋಡುವುದು ಬಂದ್‌ ಆಗುವ ಸಮಯವೂ ಹೌದು. ಈ ರಜೆ ಮುಗಿಯುವ ಮೊದಲು ಒಟಿಟಿಯಲ್ಲಿ ಮಕ್ಕಳು ಮಾತ್ರವಲ್ಲದೆ ಮಕ್ಕಳ ಜತೆ ದೊಡ್ಡವರೂ ನೋಡಬಹುದಾದ ಸಿನಿಮಾವೊಂದರ ಪರಿಚಯ ಇಲ್ಲಿದೆ. ನೆಟ್‌ಫ್ಲಿಕ್ಸ್‌ನಲ್ಲಿರುವ ಮಾನ್‌ಸ್ಟರ್‌ ಹಂಟ್‌ 2 ಸಿನಿಮಾದ ವಿವರ ಇಲ್ಲಿದೆ.

ಹೀಗಾಗಲೇ ಸಾಕಷ್ಟು ಮಕ್ಕಳಿಗೆ ಮಾನ್‌ಸ್ಟರ್‌ ಹಂಟ್‌ನ ಪರಿಚಯ ಇರಬಹುದು. ಈ ಹಳೆಯ ಸಿನಿಮಾವನ್ನು ಸಾಕಷ್ಟು ಜನರು ನೋಡಿರಬಹುದು. ಇದರ ಮುಂದುವರೆದ ಭಾಗ ಮಾನ್‌ಸ್ಟಾರ್‌ 2. ಈ ಸಿನಿಮಾದಲ್ಲಿಯೂ ಮುದ್ದು ರಾಕ್ಷಸ ಮಗು ವುಂಬಾನ ಕಥೆಯಿದೆ.

ಮಾನ್‌ಸ್ಟರ್ ಹಂಟ್ 2 ರಾಮನ್ ಹುಯಿ ನಿರ್ದೇಶಿಸಿದ 2018ರ ಫ್ಯಾಂಟಸಿ ಹಾಸ್ಯ ಸಾಹಸ ಚಿತ್ರ. ಚೀನೀ-ಹಾಂಗ್ ಕಾಂಗ್ ಸಹ-ನಿರ್ಮಾಣವಾದ ಇದರಲ್ಲಿ ಟೋನಿ ಲೆಯುಂಗ್, ಬಾಯಿ ಬೈಹೆ, ಜಿಂಗ್ ಬೋರಾನ್, ಲಿ ಯುಚುನ್ ಮತ್ತು ಟೋನಿ ಯಾಂಗ್ ನಟಿಸಿದ್ದಾರೆ.

2015 ರ ಮಾನ್ಸ್ಟರ್ ಹಂಟ್‌ನ ಮುಂದಿನ ಭಾಗವಾಗಿ ಈ ಚಿತ್...