Bengaluru, ಮಾರ್ಚ್ 3 -- Sankranthiki Vasthunam OTT: ಚಿತ್ರಮಂದಿರಗಳಲ್ಲಿ ಸೂಪರ್‌ ಹಿಟ್ ಆಗಿದ್ದ ತೆಲುಗಿನ "ಸಂಕ್ರಾಂತಿಕಿ ವಸ್ತುನಾಂ" ಸಿನಿಮಾ, ಇದೀಗ ಒಟಿಟಿಯಲ್ಲೂ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಭಾನುವಾರ ಕಿರುತೆರೆ ಮತ್ತು ಒಟಿಟಿಗಳಲ್ಲಿ ಏಕಕಾಲದಲ್ಲಿ ಆಗಮಿಸಿ, ಅದರಲ್ಲೂ ಒಟಿಟಿಯಲ್ಲಿ ಈ ಸಿನಿಮಾ ಸೂಪರ್‌ ಓಪನಿಂಗ್‌ ಪಡೆದುಕೊಂಡಿದೆ. ವಿಕ್ಟರಿ ವೆಂಕಟೇಶ್ ನಾಯಕನಾಗಿ ನಟಿಸಿರುವ ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದಾಗ ಬರೋಬ್ಬರಿ 300 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್‌ ಮಾಡಿ ದಾಖಲೆ ಸೃಷ್ಟಿಸಿದೆ. ಇದೀಗ ಒಟಿಟಿಯಲ್ಲಿಯೂ ದೊಡ್ಡ ಸದ್ದು ಮಾಡುತ್ತಿದೆ.

ಜೀ5 ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ "ಸಂಕ್ರಾಂತಿಕಿ ವಸ್ತುನಾಂ" ಈ ಚಿತ್ರವು ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಬಿಡುಗಡೆಯಾದ 12 ಗಂಟೆಗಳಲ್ಲಿ 1.3 ಮಿಲಿಯನ್ (13 ಲಕ್ಷ) ವೀಕ್ಷಕರು ಚಿತ್ರವನ್ನು ವೀಕ್ಷಿಸಿದ್ದಾರೆ. 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ದಾಖಲಿಸಲಾಗಿದೆ. ಇದು ಜೀ5 ಒಟಿಟಿಯಲ್ಲಿ ಹೊಸ ದಾಖಲೆಯಾಗಿದೆ.

"ಸಂಕ್ರಾಂತಿ...