ಭಾರತ, ಏಪ್ರಿಲ್ 21 -- ಕೆಲವು ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಹೆಸರು ಗಳಿಸಿಲ್ಲ ಎಂದರೂ ಒಟಿಟಿಯಲ್ಲಿ ಬಿಡುಗಡೆಯಾದ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತವೆ. ಬಾಕ್ಸ್ ಆಫೀಸ್‌ ಕಲೆಕ್ಷನ್ ಮಾಡದ ಚಿತ್ರಗಳೂ ಕೂಡ ಒಟಿಟಿಯಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಉದಾಹರಣೆಗಳು ಹಲವಿವೆ. ಅಂಥವುಗಳ ಸಾಲಿಗೆ ಇತ್ತೀಚೆಗೆ ಒಂದು ಸಿನಿಮಾ ಸೇರಿದೆ. ಅದುವೇ ತಮಿಳಿನ 'ಸ್ವೀಟ್‌ ಹಾರ್ಟ್‌'.

ತಮಿಳಿನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಸ್ವೀಟ್‌ ಹಾರ್ಟ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಹಳ್ಳ ಹಿಡಿದಿತ್ತು. ಮಾರ್ಚ್ 14 ರಂದು ತಮಿಳುನಾಡಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸ್ವೀಟ್ ಹಾರ್ಟ್ ಚಿತ್ರಕ್ಕೆ ಅಲ್ಲಿನ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊರೆಯಿತು. ಈ ಸಿನಿಮಾ ಗಲ್ಲಾಪೆಟ್ಟಿಗೆ ತುಂಬಿಸಲು ಸೋತಿತು.

ಈ ಚಿತ್ರ ಐಎಂಡಿಬಿಯಿಂದ 10 ರಲ್ಲಿ 7.7 ರೇಟಿಂಗ್ ಅನ್ನು ಪಡೆದುಕೊಂಡಿದೆ. ಆದರೆ ಈಗ ರೇಟಿಂಗ್ ಬದಲಾಗಿದೆ. ಏಪ್ರಿಲ್ 20 ರಂದು ಸ್ವೀಟ್ ಹಾರ್ಟ್ ಐಎಂಡಿಬಿ ರೇಟಿಂಗ್ 10ರಲ್ಲಿ 5.6ಕ್ಕೆ ಇಳಿದಿ...