ಭಾರತ, ಫೆಬ್ರವರಿ 25 -- ಶೇನ್ ನಿಗಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಮದರಸ್ಕಾರನ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಜನವರಿ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಮದರಸ್ಕಾರನ್ ತಮಿಳಿನಲ್ಲಿ ಬಿಡುಗಡೆಯಾಗ ಚಿತ್ರವಾಗಿತ್ತು ಈಗ ತೆಲುಗಿನಲ್ಲಿಯೂ ಪ್ರಸಾರವಾಗುತ್ತಿದೆ. ಆಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಹಲವರಿಗೆ ಈ ಸಿನಿಮಾ ಕೂಡ ಇಷ್ಟವಾಗುತ್ತದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಅಷ್ಟೊಂದು ಸದ್ದು ಮಾಡದೇ ಇದ್ದರೂ ಈ ಸಿನಿಮಾ ಒಟಿಟಿಯಲ್ಲಿ ಹಿಟ್ ಆಗುವ ನಿರೀಕ್ಷೆ ಹೊಂದಿದೆ.

ಸಿನಿಮಾದ ಕಥೆ ಏನು?ಸತ್ಯ ಎಂಬ ಒಬ್ಬ ಯುವಕ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಬಯಸುತ್ತಾನೆ. ಅದೇ ಕಾರಣಕ್ಕೆ ಅವನು ತನ್ನ ಊರಿಗೆ ಬರುತ್ತಾನೆ. ಆದರೆ ಅವನ ಬದುಕಿನಲ್ಲಿ ಅವನು ಅಂದುಕೊಂಡಂತೆ ಏನೂ ಆಗುವುದಿಲ್ಲ, ಮದುವೆಯ ದಿನವೇ ಅವನಿಗೆ ಆಘಾತವೊಂದು ಕಾದಿರುತ್ತದೆ. ಅವನು ತನ್ನ ತಂದೆ ತಾಯಿ ಜತೆ ಊರಲ್ಲಿರುತ್ತಾನೆ. ಆದರೆ ಅವನ ಮೇಲೆ ಅಪರಿಚಿತರಿಂದ ದಾಳಿಯಾಗುತ್ತದೆ. ಆ...