Bangalore, ಏಪ್ರಿಲ್ 16 -- ಒಟಿಟಿಯಲ್ಲಿ ಬೋಲ್ಡ್‌ ತಮಿಳು ಸಿನಿಮಾ: ಸಲಿಂಗಕಾಮ, ಲೆಸ್ಬಿಯನ್‌ ಪ್ರೇಮದ ಕಥೆಗಳ ಕುರಿತು ಸಮಾಜ ಈಗಲೂ ವಿಚಿತ್ರವಾಗಿ ನೋಡುತ್ತದೆ. ಲೆಸ್ಬಿಯನ್‌ ಲವ್‌ ಕುರಿತು ಕೆಲವೊಂದು ದೇಶಗಳು ಮುಕ್ತವಾಗಿದೆ. ಆದರೆ, ಭಾರತದಲ್ಲಿ ಈಗಲೂ ಲೆಸ್ಬಿಯನ್‌ ಪ್ರೇಮದ ಕುರಿತು ನೇರವಾಗಿ ಹೇಳಲು ಹಿಂಜರಿಯುತ್ತಾರೆ. ಸುಪ್ರೀಂ ಕೋರ್ಟ್ ಇದು ಕಾನೂನುಬಾಹಿರವಲ್ಲ ಎಂದು ತೀರ್ಪು ನೀಡಿದ ನಂತರವೂ ಲೆಸ್ಬಿಯನ್‌ ಪ್ರೇಮದ ಕುರಿತು ಮಡಿವಂತಿಕೆ ಕಡಿಮೆಯಾಗಿಲ್ಲ. ಆದರೆ, ಕೆಲವೊಂದು ಸಿನಿಮಾ, ವೆಬ್‌ ಸರಣಿಗಳು ಲೆಸ್ಬಿಯನ್‌ ಲವ್‌ಸ್ಟೋರಿಗಳಿಗೆ ಒತ್ತು ನೀಡುತ್ತಿವೆ. ಇತ್ತೀಚೆಗೆ ತಮಿಳಿನಲ್ಲಿ ಲೆಸ್ಬಿಯನ್‌ ಪ್ರೇಮಕಥೆಯ ಸಿನಿಮಾವೊಂದು ಬಂದಿದೆ.

ಕಾದಲ್‌ ಎನ್ಬುದು ಪೋದು ಉಧಮೈ ಸಿನಿಮಾವು ಈ ಸೋಮವಾರ (ಏಪ್ರಿಲ್‌ 14) ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದು ಪ್ರೇಮಿಗಳ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಈಗ ಸನ್‌ನೆಕ್ಸ್ಟ್‌ ಒಟಿಟಿಯಲ್ಲಿ ನೋಡಬಹುದು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ಬಳಿಕ ...