Bangalore, ಏಪ್ರಿಲ್ 25 -- ಮ್ಯಾಡ್ ಸ್ಕ್ವೇರ್ ಒಟಿಟಿ: ಪ್ರತಿ ವಾರ ಅನೇಕ ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಯ ಹೊಸ ಸಿನಿಮಾಗಳು ಒಟಿಟಿಗೆ ಬರುತ್ತಲೇ ಇರುತ್ತವೆ. ಇವುಗಳಲ್ಲಿ ಹೆಚ್ಚಿನವು ಶುಕ್ರವಾರದಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಉಳಿದ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಸಿನಿಮಾಗಳು ಅಪರೂಪಕ್ಕೆ ಒಂದರಂತೆ ಬರುತ್ತವೆ. ಇಂದು ಅಯ್ಯನ ಮನೆ ವೆಬ್‌ ಸರಣಿ ಬಿಡುಗಡೆಯಾಗಿದೆ. ತೆಲುಗು ಭಾಷೆಯ ಸಿನಿಮಾಗಳನ್ನು ಇಷ್ಟಪಡುವಿರಾದರೆ ಕಾಮಿಡಿ ಸಿನಿಮಾವೊಂದು ನಿಮಗಾಗಿ ಕಾಯುತ್ತಿದೆ. ಅದರ ಹೆಸರು ಮ್ಯಾಡ್‌ ಸ್ಕ್ವೇರ್‌. ಇದು ಕನ್ನಡ ಸೇರಿದಂತೆ ಭಾರತದ ಐದು ಭಾಷೆಗಳಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಿದೆ.

ಮ್ಯಾಡ್ ಚಿತ್ರವು 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಹೆಚ್ಚು ನಿರೀಕ್ಷೆಯಿಲ್ಲದೆ ಬಿಡುಗಡೆಯಾದ ಈ ಸಿನಿಮಾ ಸೂಪರ್‌ಹಿಟ್‌ ಆಯಿತು. ಸಂಗೀತ ಶೋಭನ್, ನಾರ್ನೆ ನಿತಿನ್ ಮತ್ತು ರಾಮ್ ನಿತಿನ್ ಮೂವರು ನಾಯಕಿಯರಾಗಿ ನಟಿಸಿದ ಮ್ಯಾಡ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಇದೀಗ ನೆಟ್‌ಫ...