Bengaluru, ಏಪ್ರಿಲ್ 18 -- ಚಿಯಾನ್ ವಿಕ್ರಮ್ ಅಭಿನಯದ ತಮಿಳು ಆಕ್ಷನ್ ಥ್ರಿಲ್ಲರ್ 'ವೀರ ಧೀರ ಸೂರನ್: ಪಾರ್ಟ್ 2' ಸಿನಿಮಾ ಡಿಜಿಟಲ್ ಡೆಬ್ಯೂ ಮಾಡಲು ಸಿದ್ಧವಾಗಿದೆ. ಥಿಯೇಟರ್‌ನಲ್ಲಿ ಅಭಿಮಾನಿಗಳನ್ನು ಮನರಂಜಿಸಿದ ವಿಕ್ರಮ್, ಈಗ ಒಟಿಟಿಯಲ್ಲಿಯೂ ರಂಜಿಸಲು ಬರುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ನಿರೀಕ್ಷಿತ ಕಲೆಕ್ಷನ್‌ ಮಾಡದ ಈ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇದೀಗ ಒಟಿಟಿಗೆ ಬರಲು ಅಣಿಯಾಗಿದ್ದು, ಇಲ್ಲಿ ಅದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕು. ಹೀಗಿದೆ ಈ ಸಿನಿಮಾದ ಡಿಜಿಟಲ್‌ ಸ್ಟ್ರೀಮಿಂಗ್‌ ಕುರಿತ ವಿವರ.

ಬಹುತೇಕ ಸಿನಿಮಾಗಳು ಮೊದಲ ಭಾಗದ ಬಳಿಕ ಎರಡನೇ ಭಾಗವನ್ನು ಸೀಕ್ವೆಲ್‌ ರೂಪದಲ್ಲಿ ತೆರೆಗೆ ತರುತ್ತವೆ. ಆದರೆ, ʻವೀರ ಧೀರ ಸೂರನ್‌ʼ ವಿಚಾರದಲ್ಲಿ ಮಾತ್ರ ಹಾಗಿಲ್ಲ. ಎರಡನೇ ಭಾಗ ಈಗಾಗಲೇ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಪಾರ್ಟ್‌ 1 ಸಿನಿಮಾ ಸೆಟ್ಟೇರಲಿದೆ. ಇದೀಗ ಇದೇ ವೀರ ಧೀರ ಸೂರನ್‌ ಪಾರ್ಟ್‌ 2 ಸಿನಿಮಾ ಒಟಿಟಿ ಆಗಮಿಸುತ್ತಿದೆ. ಇನ್ನೇನು ಮುಂದಿನ ವ...