ಭಾರತ, ಏಪ್ರಿಲ್ 12 -- Rakshasa OTT Release: ಸ್ಯಾಂಡಲ್‌ವುಡ್‌ನ ಡೈನಾಮಿಕ್‌ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಹಾರರ್ ಸಿನಿಮಾ ರಾಕ್ಷಸ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ನೀವು ಹಾರರ್ ಥ್ರಿಲ್ಲರ್ ಸಿನಿಮಾ ಪ್ರೇಮಿಯಾದ್ರೆ ಈ ವಾರಾಂತ್ಯದಲ್ಲಿ ಮಿಸ್ ಮಾಡದೇ ಈ ಸಿನಿಮಾ ನೋಡಿ. ಮಮ್ಮಿ ಸೇವ್ ಮಿ ನಿರ್ದೇಶಕ ಲೋಹಿತ್ ಎಚ್‌. ಈ ಸಿನಿಮಾಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಕ್ಷಸ ಸಿನಿಮಾ ಮಾರ್ಚ್ 7 ರಂದು ತೆರೆ ಕಂಡಿತ್ತು.

ರಾಕ್ಷಸ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಜ್ವಲ್ ದೇವರಾಜ್ ನಟನೆಗೆ ಶಹಭಾಸ್ ಎಂದಿರುವ ಪ್ರೇಕ್ಷಕ, ಚಿತ್ರದ ಹಾರರ್ ಎಲಿಮೆಂಟ್‌ಗಳನ್ನು ಮೆಚ್ಚಿರಲಿಲ್ಲ. ದೊಡ್ಡ ಪರದೆ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇದೀಗ ಒಟಿಟಿ ಲೋಕವನ್ನು ಪ್ರವೇಶಿಸಿದ್ದಾನೆ ರಾಕ್ಷಸ.

ಪ್ರಜ್ವಲ್ ದೇವರಾಜ್ ರಾಕ್ಷಸ ಸಿನಿಮಾ ಸನ್‌ ನೆಕ್ಸ್ಟ್‌ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ಸನ್‌ ನೆಕ್ಸ್ಟ್‌ನಲ್ಲಿ ಈಗಾಗಲೇ ಪ್ರಜ್ವಲ್‌ ನಟನೆಯ ಜಂಟಲ್‌ಮ್ಯಾನ್ ಸೇರಿದಂತೆ ಹಲವು ಸಿ...