Bengaluru, ಏಪ್ರಿಲ್ 24 -- ಇತ್ತೀಚಿನ ದಿನಗಳಲ್ಲಿ ಮಲಯಾಳಂ ಸಿನಿಮಾಗಳು ದೊಡ್ಡ ಯಶಸ್ಸು ಕಾಣುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕಳೆದ ತಿಂಗಳು ಬಿಡುಗಡೆಯಾಗಿ ಮಲಯಾಳಂ ಚಿತ್ರರಂಗದಲ್ಲಿ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದ ಸಿನಿಮಾ ʻಎಲ್2 ಎಂಪುರಾನ್ʼ. 2019ರಲ್ಲಿ ಸೂಪರ್ ಹಿಟ್ ಆಗಿದ್ದ ಲೂಸಿಫರ್ ಸಿನಿಮಾದ ಮುಂದುವರಿದ ಭಾಗವಾಗಿ ಇದು ಮೂಡಿಬಂದಿತ್ತು.

ʻಎಂಪುರಾನ್ʼ ಎಂದರೆ ದೇವರಿಗಿಂತ ಕಡಿಮೆ, ಚಕ್ರವರ್ತಿಗಿಂತ ಹೆಚ್ಚು ಎಂಬ ಅರ್ಥ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಮತ್ತೊಬ್ಬ ಮಲಯಾಳಿ ಹೀರೋ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದಾರೆ. ರಾಜಕೀಯ ಆಕ್ಷನ್ ಥ್ರಿಲ್ಲರ್ ಆಗಿ ಎಲ್2 ಎಂಪುರಾನ್ ಸಿನಿಮಾ ನಿರ್ಮಾಣವಾಗಿದೆ. ಡ್ರಗ್ಸ್, ಅಂತಾರಾಷ್ಟ್ರೀಯ ಮಾಫಿಯಾ, ಕುಟುಂಬ ಭಾವನೆಗಳು, ರಾಜಕೀಯ ಇತ್ಯಾದಿ ವಿಷಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

2019ರಲ್ಲಿ ಲೂಸಿಫರ್ ಸೂಪರ್ ಹಿಟ್ ಆದ ನಂತರ ಈ ಸಿನಿಮಾದ ಮುಂದುವರಿದ ಭಾಗದ ಬಗ್ಗೆ ನಿರೀಕ್ಷೆಗಳು ಹೆಚ್...