ಭಾರತ, ಏಪ್ರಿಲ್ 2 -- Madhushala OTT Release: ಮಧುಶಾಲಾ, ವರಲಕ್ಷ್ಮೀ ಶರತ್‌ ಕುಮಾರ್ ನಟನೆಯ ಕ್ರೈಂ ಥ್ರಿಲ್ಲರ್ ಸಿನಿಮಾ. ಜಿ ಸುಧಾಕರ್ ನಿರ್ದೇಶನದ ಈ ಸಿನಿಮಾದಲ್ಲಿ ಮನೋಜ್ ನಂದಮ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕ್ಷಣ ಕ್ಷಣಕ್ಕೂ ಕುತೂಹಲ ಕಾಯ್ದುಕೊಳ್ಳುವ ಈ ಚಿತ್ರವು ಮಾರ್ಚ್ 31ರಿಂದ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ.

ಮಧುಶಾಲಾ ಚಿತ್ರ ಈಟಿವಿ ವಿನ್‌ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರವು ಒಂದು ಅಪಹರಣ ಸುತ್ತಲೂ ನಡೆಯುವ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾದಲ್ಲಿ ಸಾಕಷ್ಟು ತಿರುವುಗಳು ಎದುರಾಗುತ್ತದೆ. ಈಟಿವಿ ವಿನ್‌ನಲ್ಲಿ ಸಿನಿಮಾ ಪ್ರಸಾರವಾಗುತ್ತಿದೆ ಎನ್ನುವ ವಿಚಾರವನ್ನು ಸ್ವತಃ ಈಟಿವಿ ವಿನ್‌ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.

ಮಧುಶಾಲಾ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಮನೋಜ್ ನಂದಂ, ಯಾನಿ, ಇನಾಯಾ ಸುಲ್ತಾನಾ, ತನಿಕೆಲ್ಲ ಭರಣಿ, ರಘುಬಾಬು, ರಾಕೆಟ್ ರಾಘವ, ರಘುಬಾಬು, ಚಿನ್ನಾ ಮತ್ತು ರವಿವರ್ಮ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ...