Hyderabad, ಫೆಬ್ರವರಿ 5 -- ಕೋಬಾಲಿ ಒಟಿಟಿ: 'ಕೋಬಾಲಿ' ಒಂದು ರಿವೇಂಜ್ ಆಕ್ಷನ್ ಥ್ರಿಲ್ಲರ್ ತೆಲುಗು ವೆಬ್‌ ಸರಣಿ. ಈ ಸಿನಿಮಾ ಫೆಬ್ರವರಿ ಮೊದಲ ವಾರದಲ್ಲಿ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತದೆ ಎಂದು ಮುಂಚಿತವಾಗಿ ತಿಳಿಸಲಾಗಿತ್ತು. ಅದರಂತೆ ಫೆಬ್ರವರಿ 4ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‍‌ನಲ್ಲಿ ಈ ವೆಬ್‌ ಸರಣಿ ಸ್ಟ್ರೀಮಿಂಗ್ ಆರಂಭಿಸಿದೆ. ಇದರಲ್ಲಿ ರವಿಪ್ರಕಾಶ್‌, ಶ್ಯಾಮಲಾ, ರಾಕಿ ಸಿಂಗ್ ಮತ್ತು ವೆಂಕಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸರಣಿಯನ್ನು ರೇವಂತ್ ಲೇವಕ ನಿರ್ದೇಶಿಸಿದ್ದಾರೆ.

ಒಟಿಟಿಯಲ್ಲಿ ಸಾಕಷ್ಟು ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಹಿಂದಿ, ಇಂಗ್ಲೀಷ್‌, ಕನ್ನಡ ತಮಿಳು, ತೆಲುಗು ಹೀಗೆ ನಾನಾ ಭಾಷೆಗಳಲ್ಲಿ ವೆಬ್‌ ಸರಣಿಗಳು ಲಭ್ಯವಿದೆ. ಕ್ರೈಮ್‌ ಥ್ರಿಲರ್ ಕಥೆಗಳೆಂದರೆ ಈ ಜನರು ಹೆಚ್ಚು ಆಸಕ್ತಿಯಿಂದ ನೋಡುತ್ತಾರೆ. ಆ ಕಾರಣದಿಂದ ಕ್ರೈಮ್‌, ಆಕ್ಷನ್ ಮತ್ತು ಥ್ರಿಲ್ಲರ್ ದೃಶ್ಯಗಳನ್ನು ಹೊಂದಿರುವ ಸಿನಿಮಾ ಹಾಗೂ ವೆಬ್‌ ಸರಣಿಗಳೇ ಹೆಚ್ಚಾಗಿ ತೆರೆಕಾಣುತ್ತಿವೆ. ಅದೇ ರೀತಿ ತೆಲುಗಿನ ಈ ಕ...