Bengaluru, ಫೆಬ್ರವರಿ 7 -- Max World Television Premiere: ಡಿಸೆಂಬರ್‌ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಸದ್ದು ಮಾಡಿತ್ತು ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್‌ ಸಿನಿಮಾ. ಕಾರ್ತಿಕೇಯನ್‌ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿದ್ದ ಮ್ಯಾಕ್ಸ್‌, ಕಿಚ್ಚನ ಅಭಿಮಾನಿಗಳಿಗೂ ಮ್ಯಾಕ್ಸಿಮಮ್‌ ಇಷ್ಟವಾಗಿತ್ತು. ಹೀಗಿರುವಾಗಲೇ ಇದೇ ಸಿನಿಮಾ ಇದೀಗ ಒಟಿಟಿಗೂ ಮುನ್ನವೇ ಕಿರುತೆರೆಯಲ್ಲಿ ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಆಗಲಿದೆ.

ತಮಿಳಿನ ನಿರ್ಮಾಪಕ ಕಲೈಪುಲಿ ಎಸ್‌ ದಾನು ನಿರ್ಮಾಣದಲ್ಲಿ ಮೂಡಿಬಂದ ಮ್ಯಾಕ್ಸ್‌ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿಯೂ ಮೋಡಿ ಮಾಡಿತ್ತು. ಸ್ಯಾಕ್ನಿಲ್‌ ತಾಣದ ಮಾಹಿತಿ ಪ್ರಕಾರ 45.95 ಕೋಟಿ ರೂ. ಕಲೆಕ್ಷನ್‌ ಮಾಡಿದ್ದು ಒಂದೆಡೆಯಾದರೆ, ಡಿಜಿಟಲ್‌ ಹಕ್ಕುಗಳು ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದಲೂ ಈ ಸಿನಿಮಾಕ್ಕೆ ಒಳ್ಳೆಯ ಮೊತ್ತ ಹರಿದುಬಂದಿದೆ. ಇದೀಗ, ಚಿತ್...