Bengaluru, ಫೆಬ್ರವರಿ 6 -- Bharjari Bachelors Season 2: ಜೀ ಕನ್ನಡದಲ್ಲೀಗ ಹೊಸ ರಿಯಾಲಿಟಿ ಶೋನ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಕಳೆದ ವರ್ಷದಿಂದ ಆರಂಭವಾದ ಭರ್ಜರಿ ಬ್ಯಾಚುಲರ್ಸ್‌, ಇದೀಗ ತನ್ನ ಎರಡನೇ ಆವೃತ್ತಿ ಜತೆಗೆ ಆಗಮಿಸುತ್ತಿದೆ. ಈಗಾಗಲೇ ಕಿರು ಪ್ರೋಮೋಗಳ ಮೂಲಕ ಕಾಮಿಡಿಗೆ ಕಿಚ್ಚು ಹಚ್ಚಿದ್ದ ಈ ಶೋ, ಇದೀಗ ಮತ್ತಷ್ಟು ಹೊಸತನದಿಂದ ಕೂಡಿರಲಿದೆ ಎಂಬುದಕ್ಕೆ, ಹೊಸ ಪ್ರೋಮೋ ಇಂದು (ಫೆ. 6) ಬಿಡುಗಡೆಯಾಗಿದೆ. ಅಚ್ಚರಿ ಏನೆಂದರೆ ಈ ಸಲದ ಈ ಶೋನಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್‌ ಸಹ ಭಾಗವಹಿಸಲಿದ್ದಾರೆ.

ಹೌದು, ಈ ಸಲದ ಭರ್ಜರಿ ಬ್ಯಾಚುಲರ್ಸ್‌ ಹೊಸ ಹೊಸ ಕಂಟೆಸ್ಟಂಟ್‌ಗಳಿಂದ ಕಳೆಗಟ್ಟಿದೆ. ಅಚ್ಚರಿಯ ರೀತಿಯಲ್ಲಿ ಎರಡನೇ ಆವೃತ್ತಿಯಲ್ಲಿ ಕಾಮಿಡಿ ಕಿಕ್‌ ಹೆಚ್ಚಿಸಲು, ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡ ಕೆಲವರು ಈ ಸಲದ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ಮಿಂಚಲಿದ್ದಾರೆ. ಹೀಗಿರುವಾಗಲೇ ಈಗ ಎರಡನೇ ಪ್ರೋಮೋ ಬಿಡುಗಡೆ ಆಗಿದ್ದು, ಜಡ್ಜ್‌ಗಳ ದರ್ಶನವೂ ಆಗಿದೆ. ಇನ್ನ...