Bengaluru, ಮಾರ್ಚ್ 2 -- Suzhal The Vortex Season 2: ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ಸುಡಲ್: ದಿ ವರ್ಟೆಕ್ಸ್ ನ ಎರಡನೇ ಸೀಸನ್ ಒಟಿಟಿಗೆ ಪದಾರ್ಪಣೆ ಮಾಡಿದೆ. ಸೀಸನ್‌ 1ರ ಅಂತ್ಯಕ್ಕೆ ಮುಂದಿನ ಸೀಸನ್‌ಗೆ ಕುತೂಹಲ ಉಳಿಸಿಕೊಂಡಿದ್ದ ಈ ಸಿರೀಸ್‌, ಈಗ ಎರಡನೇ ಸೀಸನ್‌ನಲ್ಲಿಯೂ ಅದನ್ನೇ ಮುಂದುವರಿಸಿದೆ. ವೀಕ್ಷಣೆ ವಿಚಾರದಲ್ಲಿ ಮುನ್ನುಗ್ಗುತ್ತಿರುವ ಈ ಸರಣಿ, ಸದ್ಯ ಅಮೆಜಾನ್‌ ಪ್ರೈಂ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದೆ.

ಸುಡಲ್ ಸೀಸನ್‌ 2 ಸರಣಿಯಲ್ಲಿ ಕಥಿರ್ ಮತ್ತು ಐಶ್ವರ್ಯಾ ರಾಜೇಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪುಷ್ಕರ್ ಮತ್ತು ಗಾಯತ್ರಿ ಈ ಸರಣಿಗೆ ಕಥೆ ಬರೆದಿದ್ದಾರೆ. ಶುಕ್ರವಾರ (ಫೆಬ್ರವರಿ 28) ಸ್ಟ್ರೀಮಿಂಗ್ ಆದ ಎರಡನೇ ಸೀಸನ್ ಈಗಾಗಲೇ ಒಟಿಟಿಯಲ್ಲಿ ಟ್ರೆಂಡಿಂಗ್ ಆಗಿದೆ. ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತ, ವೀಕ್ಷಕರ ಗಮನ ಸೆಳೆಯುತ್ತಿದೆ.

ಫೆಬ್ರವರಿ 28ರಂದು ಸುಡಲ್ ಸೀಸನ್ 2 ಸರಣಿ ದೊಡ್ಡ ಪ್ರಚಾರದ ನಡುವೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿತು. ಮೊದಲಿಂದಲೂ ಕುತೂಹಲ ಕಾಯ್...