ಭಾರತ, ಏಪ್ರಿಲ್ 12 -- ಭಾರತದಲ್ಲಿ UPI (ಏಕೀಕೃತ ಪಾವತಿ ಇಂಟರ್ಫೇಸ್) ಸೇವೆಗಳು ಇಂದು (ಏ.12) ಶನಿವಾರ ಬೆಳಿಗ್ಗೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರು ಡಿಜಿಟಲ್ ಹಣಕಾಸು ವಹಿವಾಟುಗಳನ್ನು ಮಾಡಲು ಸಾಧ್ಯವಾಗದೆ ಒದ್ದಾಡುವಂತಾಗಿದೆ. ಒಂದು ತಿಂಗಳೊಳಗೆ ಮೂರನೇ ಬಾರಿಗೆ ಈ ರೀತಿ ಸಮಸ್ಯೆ ಉಂಟಾಗಿದೆ. ದೇಶಾದ್ಯಂತ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಈ ಅಡಚಣೆಯ ಬಿಸಿ ತಗುಲಿದೆ. ಡೌನ್‌ಡಿಟೆಕ್ಟರ್ ವರದಿಗಳ ಪ್ರಕಾರ ಈ ಸಮಸ್ಯೆ ವ್ಯಾಪಕವಾಗಿದ್ದು, ಮಧ್ಯಾಹ್ನದ ವೇಳೆಗೆ ಸುಮಾರು 1,168 ದೂರುಗಳು ದಾಖಲಾಗಿವೆಯಂತೆ.

ಗೂಗಲ್ ಪೇ ಬಳಕೆದಾರರು 96 ಜನ ಸಮಸ್ಯೆಗಳ ಬಗ್ಗೆ ದೂರು ನೀಡಿದರೆ, ಪೇಟಿಎಂ ಬಳಕೆದಾರರು 23 ಜನ ದೂರುಗಳನ್ನು ನೀಡಿದ್ದಾರೆ. ಅಡಚಣೆಯ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ. ಏತನ್ಮಧ್ಯೆ, ವಹಿವಾಟು ಸಮಸ್ಯೆಗಳನ್ನು ಎದುರಿಸುತ್ತಿರುವ ಬಳಕೆದಾರರ ಬಗ್ಗೆ NPCI ಅಧಿಕೃತ ಹೇಳಿಕೆಯನ್ನು ನೀಡಿದೆ. "NPCI ಪ್ರಸ್ತುತ ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿ...