Gadag, ಮೇ 16 -- ಒಂದೇ ಊರಿನಲ್ಲಿ 101 ಗುಡಿಗಳು, 101 ಬಾವಿಗಳು ನೋಡುವುದಕ್ಕೆ ಸಿಕ್ಕರೆ ಹೇಗಿರಬೇಡ. ಶಿಲ್ಪ ಕಲಾಕೃತಿಗಳ ಆಗರವೇ ಆಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ ಹಲವು ದೇವಾಲಯಗಳನ್ನು ಈಗಲೂ ನೋಡಬಹುದು.

ಶಿವಶರಣರಾದ ವಚನಕಾರ ಅಜಗಣ್ಣ ಹಾಗೂ ಈತನ ತಂಗಿ ಮುಕ್ತಾಯಕ್ಕನ ತವರೂರು ಗದಗ ಜಿಲ್ಲೆಯ ಲಕ್ಕುಂಡಿ. ಈ ಗ್ರಾಮವು ಪರಮ ಜಿನಭಕ್ತೆ ದಾನಚಿಂತಾಮಣಿ ಅತ್ತಿಮಬ್ಬೆಯ ತಪೋಭೂಮಿ. ಪೂಜ್ಯ ಅಲ್ಲಮಪ್ರಭು ನಡೆದಾಡಿದ ಗ್ರಾಮವಿದು. ನಾಗಲಿಂಗಯ್ಯನ ಹರಕೆಯ ಗ್ರಾಮ ಎಂದು ಕರೆಯಲಾಗುತ್ತದೆ. ಈ ಗ್ರಾಮಕ್ಕೆ ಪಾರಂಪರಿಕ ಮಹತ್ವವೂ ಇದೆ.

ಲಕ್ಕುಂಡಿಯ ಪ್ರಾಚ್ಯ ವಸ್ತು ಸಂಗ್ರಹಾಲಯ, ಕಾಶಿ ವಿಶ್ವನಾಥ, ನನ್ನೇಶ್ವರ, ಸೋಮೇಶ್ವರ, ಬ್ರಹ್ಮ ಜಿನಾಲಯ, ಮಾಣಿಕೇಶ್ವರ, ಹಾಲುಗುಂಡಿ ಬಸವಣ್ಣ ದೇಗುಲಗಳನ್ನು ಒಳಗೊಂಡಂತೆ ಅಲ್ಲಿನ ಪಾರಂಪರಿಕ ವೈಭವವನ್ನು ನೋಡಲು ಒಂದು ದಿನವಾದರೂ ಬೇಕು.

ಹನ್ನೆರಡನೇ ಶತಮಾನದ ಐತಿಹಾಸಿಕ ದೇವಸ್ಥಾನ. ಇದು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿರುವ ಪ್ರಸಿದ್ಧ ಹಿಂದೂ ದ...