Bengaluru, ಮೇ 4 -- ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ 1 ರನ್‌ ಅಂತರದಿಂದ ಸೋಲು ಕಂಡಿತು. ಕೊನೆಯವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ, ಆರ್‌ಆರ್‌ ತಂಡ ಮತ್ತೊಮ್ಮೆ ನಿರಾಶೆ ಅನುಭವಿಸಿತು. ಪಂದ್ಯದಲ್ಲಿ ರಾಜಸ್ಥಾನ ತಂಡದ ಸ್ಟ್ಯಾಂಡ್-ಇನ್ ನಾಯಕ ರಿಯಾನ್ ಪರಾಗ್, ಅಮೋಘ ಆಟವಾಡಿದರು. ಕೇವಲ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸ್ಫೋಟಕ ಸಿಕ್ಸರ್ ಸಹಾಯದಿಂದ 95 ರನ್ ಸಿಡಿಸಿದರು. ಅದರಲ್ಲೂ ಮೊಯಿನ್ ಅಲಿ ಎಸೆದ 13ನೇ ಓವರ್‌ನಲ್ಲಿ ಸತತ ಐದು ಸ್ಫೋಟಕ ಸಿಕ್ಸರ್‌ ಸಿಡಿಸಿದ್ದು ಗಮನ ಸೆಳೆಯಿತು. ಆದರೆ, ಶತಕದಂಚಿನಲ್ಲಿ ಪರಾಗ್‌ ಔಟಾಗುವುದರೊಂದಿಗೆ ಅವರ ಪ್ರಯತ್ನ ಸಾಲಲಿಲ್ಲ.

ಪಂದ್ಯದ ಎರಡನೇ ಇನ್ನಿಂಗ್ಸ್‌ ವೇಳೆ ಒಂದು ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ 5 ವಿಕೆಟ್ ನಷ್ಟಕ್ಕೆ ಕೇವಲ 71 ರನ್ ಗಳಿಸಿತ್ತು. ಆದರೆ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಆರನೇ ವಿಕೆಟ್‌ಗೆ 92 ರನ್‌ಗಳ ಆಕರ್ಷಕ ಜೊತೆಯಾಟ ಆಡಿದರು. ಇಲ್ಲಿ ರಿಯಾನ್ ಪರಾಗ್ ಸತತ 6 ಸಿಕ್ಸರ್‌ಗಳನ್ನು ...