ಭಾರತ, ಫೆಬ್ರವರಿ 28 -- ನಿರ್ದೇಶಕ ಎಸ್.ಎಸ್. ರಾಜಮೌಳಿ ವಿರುದ್ಧ ಕಿರುಕುಳದ ಆರೋಪ ಕೇಳಿ ಬಂದಿದೆ. ನಿರ್ಮಾಪಕ ಉಪ್ಪಲಪತಿ ಶ್ರೀನಿವಾಸ ರಾವ್ ಅವರಿಗೆ ರಾಜಮೌಳಿ ಚಿತ್ರಹಿಂಸೆ ನೀಡಿ ಕಿರುಕುಳ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಿರ್ಮಾಪಕ ಉಪ್ಪಲಪತಿ 1990ರ ದಶಕದಿಂದಲೂ ರಾಜಮೌಳಿ ಅವರ ಆಪ್ತ ಸ್ನೇಹಿತರಾಗಿದ್ದರಂತೆ. ಈ ಕುರಿತು ಅವರೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಉಪ್ಪಲಪತಿ ಶ್ರೀನಿವಾಸ ರಾವ್ ಅವರ 'ಸಾವಿನ ಘೋಷಣೆ' ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆರ್‌ಆರ್‌ಆರ್ ಚಲನಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ ನನ್ನ ವೃತ್ತಿ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಆಪ್ತ ಸ್ನೇಹಿತ ಎಂದು ಹೇಳಿಕೊಂಡ ಉಪ್ಪಲಪತಿ ತಾವು ಸಾಯುವುದಾಗಿ ಹೇಳಿಕೊಂಡಿದ್ದು, ನನ್ನ ಜೀವನವನ್ನು ಹಾಳು ಮಾಡಿದ್ದಾರೆ ಎಂದಿದ್ದಾರೆ. ವಿಡಿಯೋ ಚಿತ್ರೀಕರಿಸಿ ಮೆಟ್ಟು ಪೊಲೀಸ್ ಠಾಣೆಗೆ ಪತ್ರದೊಂದಿಗೆ ಕಳುಹಿಸಿದ್ದಾರೆ. ಇದನ್ನು ತಾನು ಪ್ರಚಾರಕ್ಕಾಗಿ ಮಾಡುತ್ತಿ...