Bengaluru, ಜನವರಿ 29 -- Anamadheya Ashok Kumar Trailer: ಕನ್ನಡ ಮೂಲಕ ನಟ ಕಿಶೋರ್‌, ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ, ಪರಭಾಷೆ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪಕ್ಕದ ತಮಿಳು, ತೆಲುಗು ಜತೆಗೆ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇದೇ ನಟನ ಹೊಸ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ಆ ಚಿತ್ರದ ಹೆಸರು ಅನಾಮಧೇಯ ಅಶೋಕ್ ಕುಮಾರ್. ಟ್ರೇಲರ್‌ ಜತೆಗೆ ಇದೇ ಫೆಬ್ರವರಿ 7ರಂದು ಚಿತ್ರಮಂದಿರಗಳಿಗೂ ಆಗಮಿಸಲಿದೆ ಈ ಸಿನಿಮಾ. ಇದೇ ಸಿನಿಮಾ ಬಗ್ಗೆ ಮಾಹಿತಿ ನೀಡಲು ಇಡೀ ತಂಡ, ಒಂದೆಡೆ ಸೇರಿತ್ತು.

ಎಸ್‌ ಕೆ ಎನ್ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಲಾ ಕುಮಾರ್ ಹಾಗೂ ರಮ್ಯ ಸಾಗರ್ ಕುಮಾರ್ ನಿರ್ಮಿಸಿರುವ, ಕಿಶೋರ್ ಕುಮಾರ್ ಸಹ ನಿರ್ಮಾಣವಿರುವ ಸಿನಿಮಾ "ಅನಾಮಧೇಯ ಅಶೋಕ್ ಕುಮಾರ್". ಈ ಸಿನಿಮಾ ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಾಗರ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಟ ಕಿಶೋರ್ ಕುಮಾರ್ ಹಾಗೂ "ಆಚಾರ್ & ಕೋ" ಚಿತ್ರದ ಹರ್ಷಿಲ್ ಕೌಶಿಕ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ...