ಭಾರತ, ಫೆಬ್ರವರಿ 19 -- ಕೆಲವರು ಜೀವನದಲ್ಲಿ ಸ್ವತಂತ್ರರಾಗಿ ಒಬ್ಬರೇ ಬದುಕಲು ನಿಶ್ಚಯಿಸಿರುತ್ತಾರೆ. ಮದುವೆ ಗೋಜಿಗಿಂತ ಒಂಟಿಯಾಗಿರೋದೆ ಬೆಸ್ಟ್ ಎನ್ನುತ್ತಾರೆ. ಮದುವೆಯಾದರೆ ಕೆಲ ಕಟ್ಟು ಪಾಡುಗಳಿಗೆ ಸಿಕ್ಕಿ ತಮ್ಮ ಕನಸಿನ ರೆಕ್ಕೆಗಳನ್ನು ಕತ್ತರಿಸಬೇಕಾಗಬಹುದು ಅಥವಾ ತಮ್ಮ ಸಂಗಾತಿಯ ಬೇಡಿಕೆಗಳನ್ನು ಈಡೇರಿಸುವಲ್ಲೇ ಜೀವನ ಕಳೆದು ಹೋಗಿಬಿಡುತ್ತದೆ ಎಂಬಿತ್ಯಾದಿ ಕಾರಣಗಳನ್ನು ನೀಡುತ್ತಾ ಒಂಟಿಯಾಗಿಯೇ ಇರುತ್ತಾರೆ.

ಇತ್ತೀಚೆಗೆ ಜೀವನದಲ್ಲಿ ಒಂಟಿಯಾಗಿರುವ ಜನರ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧನೆ ನಡೆಸಲಾಯಿತು. ಜರ್ಮನ್‌ನ ಬ್ರೆಮೆನ್ ವಿಶ್ವವಿದ್ಯಾಲಯದ ಸಂಶೋಧಕರು ಸೇರಿದಂತೆ 27 ಯೂರೋಪಿಯನ್ ದೇಶಗಳಲ್ಲಿರುವ 55 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 77 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಈ ಅಧ್ಯಯನದ ಪ್ರಕಾರ, ಒಂಟಿಯಾಗಿ ಇರಲು ಇಷ್ಟಪಡುವವರು ಅವರ ಜೀವನದಲ್ಲಿ ಅತೃಪ್ತರಾಗಿರುತ್ತಾರೆ, ಕಡಿಮೆ ಅನುಭವ ಮತ್ತು ಸಂತೋಷವಿಲ್ಲದ ಬದುಕನ್ನು ಸಾಗಿಸುತ್ತಿರುತ್ತಾರೆ ಎಂದು ತಿಳಿದುಬಂದಿದೆ.

ವ್ಯಕ್...