ಭಾರತ, ಫೆಬ್ರವರಿ 19 -- ಒಂಟಿತನವೆಂದರೆ ಯಾರು ಇಲ್ಲದೆ ಒಂಟಿಯಾಗುವುದು ಎಂದರ್ಥವಲ್ಲ. ಎಲ್ಲರೂ ಇದ್ದು ಒಂಟಿಯಾಗುವುದು. ಇದೊಂದು ವೈಯಕ್ತಿಕ ಅನುಭವವಾಗಿದ್ದು, ಅವರಿಗಾದ ಮಾನಸಿಕ ಆಘಾತದಿಂದ ಸಾಮಾಜಿಕವಾಗಿ ಮತ್ತು ತಮ್ಮವರಿಂದ ದೂರಾಗಿ ಒಂಟಿಯಾಗಿ ಬದುಕಲು ಇಚ್ಛಿಸುತ್ತಾರೆ. ಇದು ಅವರ ಮಾನಸಿಕ ಭಾವನೆ, ಆಲೋಚನೆಗಳು ಮತ್ತು ಆರೋಗ್ಯ ಅದರಲ್ಲೂ ಹೃದಯದ ರಕ್ತನಾಳದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ.

ಒಂಟಿತನದಿಂದ ಬದುಕಲು ಕೆಲವರಿಗೆ ಸ್ವಯಂ ಪ್ರೇರಿತವಾಗಿರಬಹುದು ಅಥವಾ ಅವರ ಸುತ್ತಲಿನ ಜನರಿಂದ ಪ್ರೇರೆಪಿತರಾಗಿರಬಹುದು. ಇದರಿಂದ ಅತೃಪ್ತಿಯಾಗಿ, ಸಂತಸವಲ್ಲದ ಜೀವನವನ್ನು ನಡೆಸುವುದರಿಂದ ಆ ವ್ಯಕ್ತಿಯ ಆರೋಗ್ಯವನ್ನು ಮಾನಸಿಕವಾಗಿ, ದೈಹಿಕವಾಗಿ ದುರ್ಬಲಗೊಳಿಸುವ ಸಾಧ್ಯತೆ ತುಂಬಾ ಇರುತ್ತದೆ.

ಬಯೋಲಾಜಿಕಲ್ ಸೈಕಲಾಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಂಟಿತನದಿಂದ ಉದ್ಭವವಾಗುವ ಸಮಸ್ಯೆಗಳು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಾಮಾಜಿಕ ಮ...