ಭಾರತ, ಫೆಬ್ರವರಿ 26 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೂರ್ನಿಯಿಂದ ಆತಿಥೇಯ ಪಾಕಿಸ್ತಾನ ಕ್ರಿಕೆಟ್‌ ತಂಡವು ಈಗಾಗಲೇ ಹೊರಬಿದ್ದಿದೆ. ಟೂರ್ನಿ ಆರಂಭದಿಂದಲೂ ಮೇಲಿಂದ ಮೇಲೆ ಹಲವು ಟೀಕೆಗಳಿಗೆ ಗುರಿಯಾಗುತ್ತಿರುವ ತಂಡವು, ಇದೀಗ ಟೂರ್ನಿಗೆ ನಡೆಸಿರುವ ಸಿದ್ಧತೆ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿವೆ. ಮಂಗಳವಾರ (ಫೆ.25) ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪ್ರಮುಖ ಪಂದ್ಯವು ಮಳೆಯಿಂದಾಗಿ ರದ್ದಾಯ್ತು. ಇದರ ಬೆನ್ನಲ್ಲೇ ಪಿಸಿಬಿ ಮೇಲೆ ಮತ್ತಷ್ಟು ಟೀಕೆ ವ್ಯಕ್ತವಾಗಿವೆ. ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ಟೀಕಿಸಿದ್ದಾರೆ. ಅಲ್ಲದೆ ಐಸಿಸಿ ದುಡ್ಡನ್ನು ಪಿಸಿಬಿ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಮೈದಾನದಲ್ಲಿ ಕೇವಲ 24 ಗಂಟೆಗಳ ನಂತರ ಮತ್ತೊಂದು ಪಂದ್ಯ ನಡೆಯಬೇಕಿತ್ತು. ಆದರೆ ಪಂದ...