ಭಾರತ, ಮಾರ್ಚ್ 12 -- ಫೆಬ್ರವರಿಯಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವ ಮೂಲಕ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಈ ಪ್ರಶಸ್ತಿ ಮೂಲಕವೇ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಜೊತೆಗೆ ಬಾಬರ್ ಅಜಮ್ ದಾಖಲೆಯನ್ನೂ ಸರಿಗಟ್ಟಿದ್ದಾರೆ.

ಗಿಲ್ ಜೊತೆಗೆ ಸ್ಟೀವ್ ಸ್ಮಿತ್, ಗ್ಲೆನ್ ಫಿಲಿಪ್ಸ್ ಕೂಡ ಫೆಬ್ರವರಿ ತಿಂಗಳ ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಆದರೆ ಶುಭ್ಮನ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಅತಿ ಹೆಚ್ಚು ಸಲ ಐಸಿಸಿ ತಿಂಗಳ ಪ್ರಶಸ್ತಿ ಜಯಿಸಿದ್ದ ಬಾಬರ್ ದಾಖಲೆ ಸಮಗೊಳಿಸಿದ್ದಾರೆ.

ಶುಬ್ಮನ್ ಗಿಲ್ ಫೆಬ್ರವರಿಯಲ್ಲಿ ಆಡಿದ 5 ಏಕದಿನ ಪಂದ್ಯಗಳಲ್ಲಿ 406 ರನ್ ಗಳಿಸಿದ್ದರು. ಬ್ಯಾಟಿಂಗ್ ಸರಾಸರಿ 100ಕ್ಕಿಂತ ಹೆಚ್ಚಿತ್ತು. ಭಾರತದ ಆರಂಭಿಕ ಆಟಗಾರ 94.19ರ ಸ್ಟ್ರೈಕ್ ರೇಟ್​ನಲ್ಲಿ ರನ್ ಗಳಿಸಿದ್ದರು.

ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭ್ಮನ್ ಸತತ ಮೂರು 50 ಪ್ಲಸ್ ಇನ್ನಿಂಗ್ಸ್ ಆಡಿ...