ಭಾರತ, ಫೆಬ್ರವರಿ 22 -- ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಆರಂಭವಾಗಿದ್ದು, ಭಾರತ ಕ್ರಿಕೆಟ್‌ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮುಂದೆ ಫೆ. 23ರ ಭಾನುವಾರ ರೋಚಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಈಗಾಗಲೇ ಪಾಕ್‌ ತಂಡ ದುಬೈ ತಲುಪಿದೆ. ಆದರೆ, ಮಹತ್ವದ ಪಂದ್ಯಕ್ಕೂ ಮುನ್ನ ವಿವಾದವೊಂದು ಎದ್ದಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ನೇರವಾಗಿ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ) ಮೇಲೆ ನೇರ ಆರೋಪ ಮಾಡಿದೆ.

ಭಾರತ ತಂಡವು ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದಿತ್ತು. ಆ ಪಂದ್ಯದ ಸಮಯದಲ್ಲಿ ನಡೆದ ಒಂದು ಸನ್ನಿವೇಶವು ಪಿಸಿಬಿಯನ್ನು ಕೆರಳಿಸಿದೆ. ಪಂದ್ಯ ನಡೆದು ಒಂದು ದಿನದ ನಂತರ ಐಸಿಸಿ ವಿರುದ್ಧ ಪಿಸಿಬಿ ಭಾರಿ ಆರೋಪ ಮಾಡಿದೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ನೇರಪ್ರಸಾರದ ಸಮಯದಲ್ಲಿ, ಚಾಂಪಿಯ...