ಭಾರತ, ಏಪ್ರಿಲ್ 30 -- ನವದೆಹಲಿ: ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (CISCE) ಇಂದು ಬೆಳಿಗ್ಗೆ 11 ಗಂಟೆಗೆ 2024-25ನೇ ಸಾಲಿನ ಐಸಿಎಸ್‌ಸಿ 10 ಮತ್ತು ಐಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಭಾರತದಾದ್ಯಂತ ಹಲವು ಮಕ್ಕಳು ತಮ್ಮ 10 ಮತ್ತು 12ನೇ ತರಗತಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದರು.

ಫೆಬ್ರುವರಿ 21 ರಿಂದ ಮಾರ್ಚ್ 27ರವರೆಗೆ ದೇಶದಾದ್ಯಂತ ಐಸಿಎಸ್‌ಇ 10ನೇ ತರಗತಿ ‍ಪರೀಕ್ಷೆ ನಡೆದಿತ್ತು. ಫೆಬ್ರುವರಿ 13 ರಿಂದ ಏಪ್ರಿಲ್ 5ರವರೆಗೆ ಐಎಸ್‌ಸಿ 12ನೇ ತರಗತಿ ಪರೀಕ್ಷೆಗಳು ನಡೆದಿದ್ದವು. ಈ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅಧಿಕೃತ ಘೋಷಣೆಯ ನಂತರ ಫಲಿತಾಂಶಗಳನ್ನು results.cisce.org ಮತ್ತು ಡಿಜಿಲಾಕರ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಫಲಿತಾಂಶ ಅಧಿಕೃತವಾಗಿ ಘೋಷಣೆಯಾದ ನಂತರ results.cisce.org. ಈ ವೆಬ್‌ಸೈಟ್‌ಗೆ ಭೇಟಿ ನೀಡಿ.

ನಂತರ ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಎಂದಿರುವಲ್ಲಿ ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ಯೂನಿಕ್ ಐಡಿ...