ಭಾರತ, ಮಾರ್ಚ್ 31 -- Aaradhya Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಬಚ್ಚನ್‌ ಪುಣೆಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾರೆ. ಕೆಲವು ಸಮಯದ ಹಿಂದೆ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ವಿವಾಹ ವಿಚ್ಛೇದನ ನೀಡಲಿದ್ದಾರೆ ವದಂತಿ ಇತ್ತು. ಈಗ ಇಂತಹ ವದಂತಿಗಳು ಇಲ್ಲ. ಏಕೆಂದರೆ, ಇವರಿಬ್ಬರು ಜತೆಯಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಈ ದಂಪತಿ ಪುಣೆಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಐಶ್ವರ್ಯಾ ಅವರ ಸೋದರಸಂಬಂಧಿ ವಿವಾಹದಲ್ಲಿ ಭಾಗವಹಿಸಿದ್ದರು. ಮದುವೆಯಲ್ಲಿ ಅವರೊಂದಿಗೆ ಮಗಳು ಆರಾಧ್ಯಾ ಕೂಡ ಇದ್ದರು. ಈಕೆಯ ದೇಸಿ ಲುಕ್‌ಗೆ ಅಭಿಮಾನಿಗಳು ಖುಷಿಗೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಐಶ್ವರ್ಯಾ ರೈ ವಿಡಿಯೋ ಹಂಚಿಕೊಂಡಿದ್ದಾರೆ. ಆರಾಧ್ಯ ತನ್ನ ಹೆತ್ತವರು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ವೇದಿಕೆಯಲ್ಲಿ ಪೋಸ್ ನೀಡುವಾಗ ಬೆರಗುಗೊಳಿಸುವ ಬಿಳಿ ಲೆಹೆಂಗಾವನ್ನು ಧರಿಸಿರುವುದನ್ನು ನೋಡಬಹುದು. ಆರಾಧ್ಯ ತನ್ನ ದೇಸಿ ಲುಕ್‌ಗ...