ಭಾರತ, ಮೇ 20 -- ನೀವು ಐಫೋನ್‌ ಬಳಕೆದಾರರಾಗಿ ಅದನ್ನು ಬ್ರೌಸಿಂಗ್‌ಗಾಗಿ ಬಳಸುವವರಾಗಿದ್ದರೆ, ಕೆಲವೊಮ್ಮೆ ಸುದೀರ್ಘ ಲೋಡಿಂಗ್ ಸಮಯ ಅಥವಾ ನಿಧಾನವಾದ ಬ್ರೌಸಿಂಗ್ ಅನುಭವ ನಿಮಗೂ ಆಗಿರಬಹುದು. ಅನೇಕ ಐಫೋನ್ ಬಳಕೆದಾರರು ಸಣ್ಣ ಸಣ್ಣ ಗೊಂದಲಗಳಿಗೆ ಅಥವಾ ಇತರ ಅಗತ್ಯಗಳಿಗೆ ವೆಬ್ ಬ್ರೌಸರ್‌ಗಳನ್ನು ಬಳಸುತ್ತಾರೆ. ಐಫೋನ್‌ನಲ್ಲಿ ಸಫಾರಿ ಸಾಮಾನ್ಯವಾಗಿ ಬಳಸುವ ವೆಬ್‌ ಬ್ರೌಸರ್‌. ನೀವು ಕೂಡಾ ಹಲವು ಬಾರಿ ಇಂಥಾ ಸಮಸ್ಯೆಯನ್ನು ಎದುರಿಸಿದ್ದರೆ ಅಥವಾ ಈಗಲೂ ಎದುರಿಸುತ್ತಿದ್ದರೆ, ನಿಮ್ಮ ಬ್ರೌಸಿಂಗ್ ಕ್ಯಾಶೆ (cache) ಅನ್ನು ತೆರವುಗೊಳಿಸಲು ಮತ್ತು ನಿಮ್ಮ ಐಫೋನ್ ಸರಾಗವಾಗಿ ಕೆಲಸ ಮಾಡುವಂತಾಗಲು ಸರಳ ಮಾರ್ಗಗಳಿವೆ.

ಕ್ಯಾಶೆ (cache) ಅನ್ನು ಕ್ಲಿಯರ್‌ ಮಾಡುವ ಮೂಲಕ ಬ್ರೌಸಿಂಗ್ ಅನುಭವವನ್ನು ವೇಗಗೊಳಿಸಬಹುದು. ಅಲ್ಲದೆ ಲಾಗಿನ್ ವಿವರಗಳು, ಆದ್ಯತೆಗಳು ಸೇರಿದಂತೆ ನಿಮ್ಮ ಬ್ರೌಸರ್‌ನಲ್ಲಿ ಸಂಗ್ರಹಿಸಿದ ಮಾಹಿತಿ ಕೂಡಾ ಸ್ವಚ್ಛವಾಗುತ್ತದೆ. ಕ್ಯಾಶೆ ತೆರವುಗೊಳಿಸುವ ಮೂಲಕ ಸಂಪೂರ್ಣ ಬ್ರೌಸಿಂಗ್ ಅನುಭವ ಹೊಸತರಂತೆ ಆಗಬಹುದು. ನೀವು ಆಗಾಗ ಭ...