ಬೆಂಗಳೂರು, ಮೇ 28 -- ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2025ರ ಋತುವಿನ ಲೀಗ್‌ ಹಂತದ ಎಲ್ಲಾ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದೆ. ನಾಲ್ಕು ತಂಡಗಳು ಕೆಲವು ದಿನಗಳ ಹಿಂದೆಯೇ ಪ್ಲೇಆಫ್‌ಗೆ ಪ್ರವೇಶಿಸಿತ್ತು. ಆದರೂ ಅಂತಿಮ ಲೀಗ್ ಪಂದ್ಯದ ಸುತ್ತ ಭಾರಿ ಕುತೂಹಲವಿತ್ತು. ಅಗ್ರ ಎರಡು ಸ್ಥಾನಿಗಳು ಯಾರಾಗ್ತಾರೆ ಎಂಬ ಕುತೂಹಲವಿತ್ತು. ಇದೀಗ ಆ ಕುತೂಹಲ ಅಂತಿಮವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದ ಬೆನ್ನಲ್ಲೇ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ. ಹೀಗಾಗಿ ತಂಡ ಕ್ವಾಲಿಫೈಯರ್‌ 1 ಪಂದ್ಯ ಆಡಲಿದೆ.

ಆರ್‌ಸಿಬಿ ತಂಡದ ಸ್ಟ್ಯಾಂಡ್-ಇನ್ ನಾಯಕ ಜಿತೇಶ್ ಶರ್ಮಾ, ಆರ್‌ಸಿಬಿ ನಾಯಕತ್ವ ವಹಿಸಿದ ಎರಡನೇ ಪಂದ್ಯದಲ್ಲಿ ಅಮೋಘ ಚೇಸಿಂಗ್‌ ನಡೆಸಿ ತಂಡಕ್ಕೆ ದಾಖಲೆಯ ಜಯ ತಂದುಕೊಟ್ಟಿದ್ದಾರೆ. ಅಲ್ಲದೆ ಆರ್‌ಸಿಬಿ ತಂಡವು ನೇರವಾಗಿ ಕ್ವಾಲಿಫೈಯರ್‌ ಆಡಲು ದಾರಿ ಮಾಡಿಕೊಟ್ಟಿದ್ದಾರೆ.

ಲಕ್ನೋ ನೀಡಿದ 228 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ (30 ಎಸೆತಗಳ...