ಭಾರತ, ಮಾರ್ಚ್ 21 -- ಐಪಿಎಲ್‌ ಸೀಸನ್‌ 18ರ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್‌ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ಐಪಿಎಲ್‌ 2025ರ ಅದ್ಧೂರಿ ಆವೃತ್ತಿಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ತಂಡಗಳು ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ಇರಲಿದ್ದು, ತಾರೆಗಳ ಸಮಾಗಮವಾಗಲಿದೆ. ಬಾಲಿವುಡ್ ಐಕಾನ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಹಲವರು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಸ್ಟಾರ್‌ಗಳ ಉಪಸ್ಥಿತಿಯು ಬಹು ನಿರೀಕ್ಷಿತ ಟೂರ್ನಿಗೆ ಮತ್ತಷ್ಟು ಮೆರುಗು ನೀಡಲಿದೆ. ಇದೇ ವೇಳೆ ತಮ್ಮ ತಂಡವು ಆರಂಭಿಕ ಪಂದ್ಯವನ್ನು ಆಡುತ್ತಿರುವುದರಿಂದ ಶಾರುಖ್ ಖಾನ್ ಕೂಡಾ ಭಾಗವಹಿಸುವ ನಿರೀಕ್ಷೆಯಿದೆ. ಸಲ್ಮಾನ್ ಖಾನ್‌ ಕೂಡಾ ತಮ್ಮ ಮುಂಬರುವ ಚಿತ್ರ ಸಿಕಂದರ್ ಪ್ರಚಾರಕ್ಕಾಗಿ ಕಾಣಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

"ಶ್ರೇಯಾ ಘೋಷಾಲ್, ದಿಶಾ ಪಟಾನಿ, ಕರಣ್ ಔಜ್ಲಾ, ಅರಿಜಿತ್ ಸಿ...