ಭಾರತ, ಮಾರ್ಚ್ 5 -- 2025ರ ಐಪಿಎಲ್ ಆವೃತ್ತಿಗೂ ಮುನ್ನ ಬಿಸಿಸಿಐ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಭಾರತೀಯ ತಂಡದಲ್ಲಿ ಇತ್ತೀಚೆಗೆ ಜಾರಿಗೆ ತಂದಿರುವ ನಿಯಮಗಳನ್ನೇ ಬಹುತೇಕ ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳಿಗೂ ವಿಸ್ತರಿಸಿದೆ. ಇದರಲ್ಲಿ ಆಟಗಾರರು ಕೇವಲ ತಂಡದ ಬಸ್‌ನಲ್ಲಿ ಮಾತ್ರವೇ ಪ್ರಯಾಣಿಸಬೇಕು ಮತ್ತು ಪಂದ್ಯ ಇಲ್ಲದ ದಿನಗಳಲ್ಲಿಯೂ ಸಹ ಕುಟುಂಬ ಸದಸ್ಯರು ಡ್ರೆಸ್ಸಿಂಗ್ ರೂಮ್‌ಗಳಿಗೆ ಪ್ರವೇಶಿಸಬಾರದು ಎಂಬ ನಿಯಮಗಳೂ ಇವೆ. ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗಿಂತ ಮೊದಲು ಮತ್ತು ಪಂದ್ಯದ ಸಮಯದಲ್ಲಿ ಆಟಗಾರರು ಮತ್ತು ಅಧಿಕಾರಿಗಳ ಸುತ್ತ ಕುಟುಂಬ ಸದಸ್ಯರ ಉಪಸ್ಥಿತಿಗೆ ಸಂಬಂಧಿಸಿದಂತೆ ಬಿಸಿಸಿಐ ನಿಯಮಗಳನ್ನು ಬಿಗಿಗೊಳಿಸಿದೆ.

ನಿಯಮಗಳ ಬಗ್ಗೆ ಮತ್ತಷ್ಟು ವಿಸ್ತೃತ ವಿವರಕ್ಕೆ ಬಿಸಿಸಿಐ ಮಾರ್ಚ್ 20ರಂದು ಮುಂಬೈನ ಕ್ರಿಕೆಟ್ ಸೆಂಟರ್‌ನಲ್ಲಿ ಎಲ್ಲಾ ತಂಡಗಳ ನಾಯಕರೊಂದಿಗೆ ಸಭೆಯನ್ನು ನಿಗದಿಪಡಿಸಿದೆ. ಸಾಮಾನ್ಯವಾಗಿ, ಈ ಸಭೆಗಳನ್ನು ಉದ್ಘಾಟನಾ ಪಂದ್ಯದ ಆತಿಥೇಯ ನಗರದಲ್ಲಿ ನಡೆಸಲಾಗುತ್ತದೆ. ಐಪಿಎಲ್ ಟೂರ್ನಿಯು ಮಾರ್ಚ...