ಭಾರತ, ಮೇ 23 -- ಐಪಿಎಲ್ 2025ರ ಋತು ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಇದುವರೆಗೆ ನಡೆದ ಐಪಿಎಲ್ ಋತುಗಳಿಗೆ ಹೋಲಿಸಿದರೆ, ಅಗ್ರ ನಾಲ್ಕು ಸ್ಥಾನಗಳು ಇಷ್ಟು ಬೇಗ ನಿರ್ಧಾರವಾಗಿದ್ದು ಇದೇ ಮೊದಲು. ಆದರೆ ಇಲ್ಲಿಗೆ ಸ್ಪರ್ಧೆ ಮುಗಿದಿಲ್ಲ. ಅಗ್ರ ಎರಡು ಸ್ಥಾನಗಳನ್ನು ಪಡೆದು ಬೇಗನೆ ಫೈನಲ್ ತಲುಪುವ ಅವಕಾಶಗಳಿರುವುದು ಅಗ್ರ ಎರಡು ತಂಡಗಳಿಗೆ ಮಾತ್ರ. ಆ ಎರಡು ತಂಡಗಳು ಯಾವುವು ಎಂಬುದು ಸದ್ಯದ ಕುತೂಹಲ. ಇದೀಗ ಈ ನಾಲ್ಕು ತಂಡಗಳ ನಡುವೆ ಆ ಪೈಪೋಟಿ ಶುರುವಾಗಿದೆ.

ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ ತಲುಪಲು ಎರಡು ಅವಕಾಶಗಳನ್ನು ಪಡೆಯುತ್ತವೆ. ಕ್ವಾಲಿಫೈಯರ್ 1ರಲ್ಲಿ ಸೋತರೂ, ತಂಡವು ಕ್ವಾಲಿಫೈಯರ್ 2ರಲ್ಲಿ ಎಲಿಮಿನೇಟರ್ ವಿಜೇತರನ್ನು ಎದುರಿಸುವ ಮೂಲಕ ಫೈನಲ್ ತಲುಪಲು ಮತ್ತೊಂದು ಅವಕಾಶವನ್ನು ಹೊಂದುತ್ತವೆ. ಹೀಗಾಗಿ ತಂಡಗಳು ಅಗ್ರ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳಲು ಶ್ರಮ ಹಾಕ...