ಭಾರತ, ಮೇ 18 -- ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ 2025ರ ಪಂದ್ಯಾವಳಿಯ ಕೊನೆಯ ಹಂತದ ಪಂದ್ಯಗಳು, ಶನಿವಾರವಾರದಿಂದ (ಮೇ 17) ಆರಂಭವಾಗಿದೆ. ಇದು ವಿವಿಧ ತಂಡಗಳ ಆಟಗಾರರ ಲಭ್ಯತೆಗೆ ಸಮಸ್ಯೆಯಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಡಬ್ಲ್ಯೂಟಿಸಿ 2025ರ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಕಾರಣದಿಂದಾಗಿ ಹಲವು ವಿದೇಶಿ ಆಟಗಾರರು ಟೂರ್ನಿಗೆ ಲಭ್ಯವಿರುವುದಿಲ್ಲ. ಕೆಲವು ಆಟಗಾರರು ಪಂದ್ಯಾವಳಿಯ ಉಳಿದ ಭಾಗಕ್ಕೆ ಅಥವಾ ಪ್ಲೇಆಫ್‌ಗಳಿಗೆ ಲಭ್ಯವಿರುವುದಿಲ್ಲ. ಇದು ಕೆಲವು ತಂಡಗಳ ಚಿಂತೆಗೆ ಕಾರಣವಾಗಿದೆ.
ಬಿಸಿಸಿಐ ಕೂಡಾ ಈ ಬಾರಿಯ ಐಪಿಎಲ್‌ಗೆ ಹೊಸ ನಿಯಮವನ್ನು ಪರಿಚಯಿಸಿದೆ. ಫ್ರಾಂಚೈಸಿಗಳು ಪಂದ್ಯಾವಳಿಯ ಉಳಿದ ಭಾಗಕ್ಕೆ ಲಭ್ಯವಿಲ್ಲದ ಆಟಗಾರರ ಬದಲಿಗೆ ತಾತ್ಕಾಲಿಕವಾಗಿ ಬದಲಿ ಆಟಗಾರರನ್ನು ಹೆಸರಿಸಲು ಅವಕಾಶ ನೀಡಿದೆ. ಆದರೆ, ಐಪಿಎಲ್ 2026ರ ಹರಾಜಿಗೂ ಮೊದಲು ಇಂಥಾ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿಲ್ಲ.
ಸದ್ಯ ಐಪಿಎಲ್‌ನ ಎರಡನೇ ಹಂತದ ಪಂದ್ಯಗಳಿಗೆ ವಿವಿಧ ತಂಡಗಳ ಪರ...
Click here to read full article from source
To read the full article or to get the complete feed from this publication, please
Contact Us.