ಭಾರತ, ಮಾರ್ಚ್ 22 -- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 18ನೇ ಆವೃತ್ತಿ ಇಂದು (ಮಾ.22) ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿಯ ಟೂರ್ನಿಯಲ್ಲಿ ಕೆಲವೊಂದು ಬದಲಾದ ನಿಯಮಗಳು ಜಾರಿಯಲ್ಲಿರಲಿವೆ. ಅಂದರೆ, ಕಳೆದ ಬಾರಿಗಿಂತ ಹೊಸ ನಿಯಮಗಳು ಈ ಬಾರಿ ಐಪಿಎಲ್‌ಗೆ ಅನ್ವಯಿಸಲಿವೆ. ಬಿಸಿಸಿಐ, ಟೂರ್ನಿಯ ಆರಂಭಕ್ಕೂ ಮುನ್ನ ಬದಲಾದ ನಿಯಮಗಳನ್ನು ಪರಿಚಯಿಸಿದೆ. ಮಾರ್ಚ್ 20ರಂದು ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯ ಬಳಿಕ ನಾಲ್ಕು ಹೊಸ ನಿಯಮಗಳನ್ನು ಕ್ರಿಕೆಟ್‌ ಮಂಡಳಿ ಘೋಷಿಸಿದೆ. ಅವುಗಳ ವಿವರ ಇಲ್ಲಿದೆ.

ಕೋವಿಡ್ 19 ಸಮಯದಲ್ಲಿ ಚೆಂಡಿಗೆ ಲಾಲಾರಸ ಬಳಕೆ (ಎಂಜಲು ಸವರುವುದು) ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, ಇದೀಗ ಐಪಿಎಲ್ 2025ಕ್ಕೆ ಈ ನಿಷೇಧವನ್ನು ತೆಗೆದುಹಾಕಲಾಗಿದೆ. ಅಂದರೆ, ಬೌಲರ್‌ಗಳು ಚೆಂಡನ್ನು ಹೊಳೆಯಿಸಲು ಲಾಲಾರಸವನ್ನು ಬಳಸಲು ಅನುಮತಿ ನೀಡಲಾಗಿದೆ. ಇದು ಚೆಂಡು‌ ಸ್ವಿಂಗ್‌ ಆಗಲು ನೆರವಾಗುತ್ತದೆ. ಈ ನಿರ್ಧಾರವು ಎಲ್ಲಾ 10 ತಂಡಗಳ ನಾಯಕರೊಂ...